Select Your Language

Notifications

webdunia
webdunia
webdunia
webdunia

ಕುಶಾಲನಗರದಲ್ಲಿ ಬಿಜೆಪಿಯ 9 ಮಂದಿಯ ವಿಚಾರಣೆ

Interrogation of 9 people of BJP in Kushalanagar
kushalnagara , ಶುಕ್ರವಾರ, 19 ಆಗಸ್ಟ್ 2022 (18:08 IST)
ಮಾಜಿ ಸಿಎಂ ಸಿದ್ದರಾಮಯ್ಯಗೆ ಕುಶಾಲನಗರದಲ್ಲಿ ಮೊಟ್ಟೆ ಎಸೆದ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪಕ್ಷ ಅಥವಾ ಸಂಘಟನೆಗೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯೊಬ್ಬ ಕಾರಿಗೆ ಮೊಟ್ಟೆ ಎಸೆದು ಪ್ರತಿಭಟನೆ ದಿಕ್ಕು ತಪ್ಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿಗರ ಪ್ರತಿಭಟನೆ ನ್ಯಾಯಯುತವಾಗಿತ್ತು. ಆದರೆ ಮೊಟ್ಟೆ ಎಸೆದದ್ದು ಬೇರೆಯವರು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಈ ಸಂಬಂಧ ಸೋಮವಾರಪೇಟೆಯ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಿದ್ದು ಹೆಚ್ಚಿನ ವಿಚಾರಣೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಇನ್ನು ಪ್ರತಿಭಟನೆ ಸಂದರ್ಭ ಅತಿರೇಕ ವರ್ತನೆಗೆ ಕಾರಣರಾದ ಕೂಡು ಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜಿ.ಮನು ಎಂಬುವವರನ್ನು ಪ್ರತಿಭಟನಾ ಸ್ಥಳದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಇವರೊಂದಿಗೆ ಸ್ವಯಂ ಪ್ರೇರಿತರಾಗಿ ಬಂದ ಇತರೆ 7 ಮಂದಿ ಸೇರಿ 9 ಮಂದಿ ವಿರುದ್ಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ಪರವಾಗಿ ಕೊಡಗು ಜಿಲ್ಲಾ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಠಾಣೆಗೆ ಆಗಮಿಸಿ ಬಿಡುಗಡೆಗೊಳಿಸುವಲ್ಲಿ ಮುಂದಾಳತ್ವ ವಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದು ಕಾರಿಗೆ ಮೊಟ್ಟೆ ಎಸೆತ - ಸಿಎಂ ಖಂಡನೆ