Publish Date: Fri, 23 Jan 2026 (19:29 IST)
Updated Date: Fri, 23 Jan 2026 (19:32 IST)
ಶಿವಮೊಗ್ಗ: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟಿ ಪವಿತ್ರಾ ಗೌಡದೆ ಮನೆಯೂಟ ನಿರಾಕರಣೆ ಮಾಡಿದ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅವರು ಶಿವಮೊಗ್ಗ ಕಾರಾಗೃಹಕ್ಕೆ ಭೇಟಿ ನೀಡಿದಾಗ ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾರಾಗೃಹದಲ್ಲಿ ಒಳ್ಳೆಯ ಊಟ ಸಿಗುತ್ತದೆ. ಮನೆಯಿಂದ ತರುವ ಊಟಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನು ಎಫ್ಎಸ್ಐಎಲ್‌ಗೆ ಪರೀಕ್ಷೆಗೆ ಕಳುಹಿಸಿ ಸರ್ಟಿಪೈಟ್ ಪಡೆದ ಬಳಿಕ ಕೈದಿಗಳಿಗೆ ನೀಡುತ್ತಿದ್ದೇವೆ ಎಂದರು.
ಜೈಲಿನಲ್ಲಿರುವ ಕೈದಿಗಳಲ್ಲಿ ಪ್ರಭಾವಶಾಲಿ ವ್ಯಕ್ತಿ ಯಾರು, ಕೆಳಮಟ್ಟದಲ್ಲಿರುವರಾರು ಎಂದು ನೋಡಲು ಸಾಧ್ಯವಿಲ್ಲ. ಸೆಕ್ಷನ್ 30 ಕರ್ನಾಟಕ ಪ್ರಿಜನರ್ಸ್ ಆಕ್ಟ್ 1963 ಪ್ರಕಾರ ಕೈದಿಗಳಿಗೆ ಊಟ, ಬಟ್ಟೆ ಪುಸ್ತಕ ಕೂಡಬೇಕು. ಈ ನಿಯಮದ ಅಡಿ ತೀರ್ಮಾನ ಮಾಡಲಾಗುತ್ತದೆ.
ಇನ್ನೂ ಕೈದಿಗಳಿಗೆ ನೀಡುವ ಊಟ ಸರ್ಟಿಫೈಡ್ ಆಗುರಯವುದರಿಂದ ಒಬ್ಬರಿಗೆ ಮನೆಯಿಂದ ಊಟ ನೀಡಿದ್ರೆ, ಮುಂದೆ ಸಾವಿರಾರು ಜನ ಇದೇ ರೀತಿ ಕೇಳುತ್ತಾರೆ. ಇದರಿಂದ ಪವಿತ್ರಗೌಡಗೆ ಮನೆ ಊಟ ನೀಡಲು ಕೋರ್ಟ್ ನಿರಾಕರಿಸಿರುವುದು ಒಳ್ಳೆಯದು ಎಂದರು.