Select Your Language

Notifications

webdunia
webdunia
webdunia
webdunia

ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಮಾಧಾನ

ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಮಾಧಾನ
ಚಿಕ್ಕಮಗಳೂರು , ಸೋಮವಾರ, 27 ಡಿಸೆಂಬರ್ 2021 (12:49 IST)
ಚಿಕ್ಕಮಗಳೂರು : ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರದ ಆದೇಶವನ್ನು ಸರಿ-ತಪ್ಪು ಎಂದು ವ್ಯಾಖ್ಯಾನ ಮಾಡೋಕಾಗಲ್ಲ. ಓಮಿಕ್ರಾನ್ಗೆ ಭಯಪಡಬೇಕಿಲ್ಲವೆಂದು ವಿಜ್ಞಾನಿಗಳೇ ಹೇಳಿದ್ದಾರೆ. ಮೂಗು ಇರುವವರಿಗೆ ನೆಗಡಿ ತಪ್ಪಲ್ಲ, ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ.

ಆಕಸ್ಮಾತ ಓಮಿಕ್ರಾನ್ ಬಂದರು ಕೂಡಾ ಸೌಮ್ಯ ಪರಿಣಾಮ ಬೀರುತ್ತದೆ ಎಂದು ಬೇರೆ ಬೇರೆ ವೈರಾಲಜಿ ವಿಜ್ಞಾನಿಗಳು ಹೇಳಿದ್ದಾರೆ ಎಂದರು.  ಸರ್ಕಾರ ಕೂಡ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು.

ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ವರದಿ ಆಧರಿಸಿ ಕರ್ನಾಟಕ ಸರ್ಕಾರ ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಮಂಗಳವಾರ ರಾತ್ರಿ 10 ಗಂಟೆಯಿಂದ ಜನವರಿ 7 ರ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಏಳು ವರ್ಷದ ಮಗುವಿನ ಮೇಲೆ ಇದೆಂಥಾ ಕಾಮಕ್ರೌರ್ಯ?!