Publish Date: Mon, 27 Dec 2021 (09:31 IST)
Updated Date: Mon, 27 Dec 2021 (09:32 IST)
ಹೈದರಾಬಾದ್: ಪುಷ್ಪ ಸಿನಿಮಾ ಸಕ್ಸಸ್ ಅಲೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣಗೆ ಈಗ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ತೆಲುಗು ಸಿನಿಮಾದಲ್ಲಿ ಮಿಂಚಿದ್ದ ನಟಿ ಈಗಾಗಲೇ ತಮಿಳಿನಲ್ಲಿ ಕಾರ್ತಿ ಜೊತೆ ಒಂದು ಸಿನಿಮಾ ಮಾಡಿದ್ದಾರೆ. ಇದೀಗ ಮತ್ತೊಂದು ತಮಿಳು ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಅದೂ ಸ್ಟಾರ್ ನಟ ವಿಜಯ್ ಜೊತೆ ನಟಿಸುವ ಆಫರ್ ಬಂದಿದೆ ಎನ್ನಲಾಗಿದೆ.
ನಿರ್ದೇಶಕ ವಂಶಿ ಆಕ್ಷನ್ ಕಟ್ ಹೇಳಲಿರುವ ಬಿಗ್ ಬಜೆಟ್ ಸಿನಿಮಾಗೆ ರಶ್ಮಿಕಾ ನಾಯಕಿಯಾಗುವ ಸಾಧ‍್ಯತೆಯಿದೆ. ಹಲವು ದಿನಗಳಿಂದ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡುವ ಆಸೆಯನ್ನು ರಶ್ಮಿಕಾ ಹೇಳಿಕೊಳ್ಳುತ್ತಿದ್ದರು. ಅಭಿಮಾನಿಗಳೂ ಅದನ್ನೇ ಬಯಸಿದ್ದರು. ಅದೀಗ ಈಡೇರುತ್ತಿದೆ ಎನ್ನಲಾಗಿದೆ.