Select Your Language

Notifications

webdunia
webdunia
webdunia
webdunia

ಕೊನೆಗೂ ಮುಂದಿನ ಸಿನಿಮಾ ಬಗ್ಗೆ ಗುಟ್ಟುಬಿಟ್ಟು ಕೊಟ್ಟ ರಾಕಿಂಗ್ ಸ್ಟಾರ್ ಯಶ್

ಕೊನೆಗೂ ಮುಂದಿನ ಸಿನಿಮಾ ಬಗ್ಗೆ ಗುಟ್ಟುಬಿಟ್ಟು ಕೊಟ್ಟ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಭಾನುವಾರ, 26 ಡಿಸೆಂಬರ್ 2021 (09:30 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಮುಫ್ತಿ ನಿರ್ದೇಶಕ ನರ್ತನ್ ಜೊತೆಗೆ ಎಂಬ ಮಾತು ಈಗಾಗಲೇ ಕೇಳಿಬಂದಿದೆ. ಆದರೆ ಆ ಸಿನಿಮಾ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಆದರೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯಶ್ ಗೆ ಪತ್ರಕರ್ತರು ನರ್ತನ್ ಜೊತೆಗಿನ ಸಿನಿಮಾ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಯಶ್ ‘ಆ ಸಿನಿಮಾ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡಲಾಗುತ್ತದೆ. ಅದಕ್ಕೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಹೇಳೋಣ. ಹರ್ಷದ ಕೂಳಿಗೆ ವರ್ಷದ ಕೂಳು ಕಳೆದುಕೊಂಡರು ಎನ್ನುವಂತಾಗುವುದು  ಬೇಡ’ ಎಂದಿದ್ದಾರೆ. ಇದರೊಂದಿಗೆ ನರ್ತನ್ ಜೊತೆಗೆ ಸಿನಿಮಾ ಮಾಡುವುದು ಗ್ಯಾರಂಟಿ ಎನ್ನುವುದು ಗೊತ್ತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ಆರ್ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು ಗೊತ್ತೇ?