Publish Date: Sat, 25 Dec 2021 (22:36 IST)
Updated Date: Sat, 25 Dec 2021 (22:38 IST)
ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಪ್ರಚಾರಕ್ಕೆ ಬಾರದ ಬಗ್ಗೆ ನಿರ್ಮಾಪಕ ಗುರುದೇಶ್ ಪಾಂಡೆ ಮಾಡಿದ ಆರೋಪಗಳಿಗೆ ನಟ ಅಜೇಯ್ ರಾವ್ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಅಲ್ಲಿ ನಮ್ಮ ಬಗ್ಗೆ ಎಲ್ಲಾ ಮಾತನಾಡಿ ಇನ್ನು, ಮಾನ ಮರ್ಯಾದೆ ಎಲ್ಲಾ ಬಿಟ್ಟು ಪಬ್ಲಿಸಿಟಿಗೆ ಬನ್ನಿ ಎಂದರೆ ಹೇಗಾಗುತ್ತೆ? ಎಂದು ಅಜೇಯ್ ಪ್ರಶ್ನೆ ಮಾಡಿದ್ದಾರೆ.
ಅವರೇ ಹೇಳಿದ ಹಾಗೆ ಇದು ಗಂಡ-ಹೆಂಡತಿ ಜಗಳದ ಹಾಗೆ. ನಮಗೆ ಜಗಳ ಆಗಿ ಡಿವೋರ್ಸ್ ಆಗಿದೆ. ಹೀಗಾಗಿ ಇನ್ನು ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಆದರೆ ಮಗು ಮಾತ್ರ ನಮ್ಮದು. ಮಗು ಇಲ್ಲಿ ಸಿನಿಮಾ. ಅದಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ, ಲವ್ ಯೂ ರಚ್ಚು ಸಿನಿಮಾದ ಯಾವುದೇ ಕಾರ್ಯಕ್ರಮವಿದ್ದರೂ ಸಿನಿಮಾ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ತಮ್ಮ ನಡುವಿನ ವಿವಾದದ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಗುರುದೇಶ್ ಪಾಂಡೆ ವಿರುದ್ಧ ಅಜೇಯ್ ವಾಗ್ದಾಳಿ ನಡೆಸಿದ್ದಾರೆ.