Publish Date: Mon, 27 Dec 2021 (09:12 IST)
Updated Date: Mon, 27 Dec 2021 (09:14 IST)
ಬೆಂಗಳೂರು: ನಟ ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಇತ್ತೀಚೆಗೆ ಪ್ರಕಟಿಸಿದ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ತಮ್ಮ ಮುದ್ದಿನ ನಾಯಿಯೇ ತಮಗೆ ಶತ್ರುವಾಗಿದೆ ಎಂದು ಡಾರ್ಲಿಂಗ್ ಕೃಷ್ಣ ತಮಾಷೆಯ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.
ತಮ್ಮ ಪತ್ನಿ ಮಿಲನಾ ನಾಗರಾಜ್ ಗೆ ಮುತ್ತು ಕೊಡಲು ಹೋದರೆ ನಾಯಿ ಅವರ ಮೈ ಮೇಲೆ ಹಾರಿ ಮುತ್ತು ಕೊಡಲೂ ಬಿಡಲ್ವಂತೆ. ಕೃಷ್ಣ ದಂಪತಿಯ ಈ ರೊಮ್ಯಾಂಟಿಕ್ ವಿಡಿಯೋಗೆ ಭಾರೀ ಲೈಕ್ಸ್ ಬಂದಿದೆ.