Select Your Language

Notifications

webdunia
webdunia
webdunia
webdunia

83 ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ

83 ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು , ಸೋಮವಾರ, 27 ಡಿಸೆಂಬರ್ 2021 (10:55 IST)
ಬೆಂಗಳೂರು: 1983 ರ ವಿಶ್ವಕಪ್ ಗೆಲುವಿನ ಕಥಾಹಂದರ ಹೊಂದಿರುವ ಬಾಲಿವುಡ್ ಮೂಲದ 83 ಸಿನಿಮಾವನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದಾರೆ.

ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಈ ಸಿನಿಮಾವನ್ನು ಕನ್ನಡದಲ್ಲಿ ಅರ್ಪಿಸಿದ್ದಾರೆ. ಈಗಾಗಲೇ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದೀಗ ಸಿಎಂ ಬೊಮ್ಮಾಯಿ, ಮಾಜಿ ಕ್ರಿಕೆಟಿಗ, 83 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಸೈಯದ್ ಕಿರ್ಮಾನಿ ಜೊತೆ ಸಿನಿಮಾ ವೀಕ್ಷಿಸಿ ಮೆಚ್ಚುಗೆಯ ಮಾತನಾಡಿದ್ದಾರೆ. ಕೋರಮಂಗಲದ ಫೋರಂ ಮಾಲ್ ನಲ್ಲಿ ಸಿಎಂ ಬೊಮ್ಮಾಯಿ ಮತ್ತು ಇತರ ಗಣ್ಯರಿಗಾಗಿ ವಿಶೇಷ ಶೋ ಏರ್ಪಡಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮುಂದೆ ಪುನೀತ್ ಪ್ರತಿಮೆ ನಿರ್ಮಿಸಿ ಅಭಿಮಾನ ಮೆರೆದ ದಂಪತಿ