ವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದ ಬಳಿಕ ಎಷ್ಟೋ ಅಭಿಮಾನಿಗಳು ವಿಶಿಷ್ಟವಾಗಿ ಅವರಿಗೆ ಗೌರವ ಸಲ್ಲಿಸುವುದನ್ನು ನೋಡಿದ್ದೇವೆ.
ಇದೀಗ ಕೂಡ್ಲಿಗಿ ತಾಲೂಕಿನ ದಂಪತಿಯೊಬ್ಬರು ತಮ್ಮ ಮನೆ ಮುಂದೆ ಅಪ್ಪು ಪ್ರತಿಮೆ ಸ್ಥಾಪಿಸಿ ಅದಕ್ಕೆ ಪೂಜೆ ಮಾಡುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ.
ಆರ್.ಟಿ. ನಾಗರಾಜ್ ಮತ್ತು ಮಲ್ಲಮ್ಮ ಎಂಬ ದಂಪತಿ ಮನೆ ಮುಂದೆ ಪುನೀತ್ ಪ್ರತಿಮೆ ಸ್ಥಾಪಿಸಿದವರು. ಅಪ್ಪು ಅಭಿಮಾನಿಗಳಾದ ದಂಪತಿ ಅವರ ಸಾಮಾಜಿಕ ಕೆಲಸಗಳು ಇನ್ನೊಬ್ಬರಿಗೆ ಸ್ಪೂರ್ತಿಯಾಗಲಿ ಎಂಬ ಉದ್ದೇಶಕ್ಕೆ ಈ ಕೆಲಸ ಮಾಡಿದ್ದಾರಂತೆ.