ಬೆಂಗಳೂರು: ನಟಿ ರಚಿತಾ ರಾಂ ಏಕ್ ಲವ್ ಯಾ ಸಿನಿಮಾದಲ್ಲಿ ಸಿಗರೇಟು ಸೇದುವ ದೃಶ‍್ಯ ಸಾಕಷ್ಟು ವೈರಲ್ ಆಗಿತ್ತು. ಏಕ್ ಲವ್ ಯಾ ಸಿನಿಮಾ ಕಾರ್ಯಕ್ರಮದಲ್ಲಿ ರಚಿತಾ ಈ ದೃಶ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸುಮ್ ಸುಮ್ನೇ ಇಂತಹ ದೃಶ್ಯಗಳಲ್ಲಿ ನಟಿಸಲ್ಲ. ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೆ ಅರ್ಥ ಇದೆ. ಸಿನಿಮಾ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ ಎಂದಿದ್ದಾರೆ.
ಇನ್ನು ಸಿಗರೇಟು ಸೇದುವ ದೃಶ್ಯದಲ್ಲಿ ನಟಿಸುವಾಗ ಕೃತಕವಾಗಿ ಕಾಣಿಸಿಕೊಂಡರೆ ಚೆನ್ನಾಗಿರಲ್ಲ. ಸಹಜವಾಗಿ ಮೂಡಿಬಂದರೆ ಆ ಪಾತ್ರಕ್ಕೆ ಒಂದು ಕಳೆ ಎಂದು ರಚಿತಾ ಹೇಳಿಕೊಂಡಿದ್ದಾರೆ.