Publish Date: Mon, 28 Aug 2017 (19:27 IST)
Updated Date: Mon, 28 Aug 2017 (19:28 IST)
ಬಿಬಿಎಂಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಮೇಯರ್ ಚುನಾವಣೆ ನಡೆಯಲಿದೆ. ಆದರೆ, ಸದ್ಯಕ್ಕೆ ಮೇಯರ್ ಚುನಾವಣೆ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಸಮಯ ಬಂದಾಗ ಹೇಳಿಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಮುಂದುವರಿಯಲಿದೆ. ಉಭಯ ಪಕ್ಷಗಳ ನಡುವೆ ಯಾವುದೇ ತೊಂದರೆ ಎದುರಾಗಿಲ್ಲ.ಯಾಕೆ ಮುಂದುವರಿಯಬಾರದು ಎಂದು ತಿರುಗೇಟು ನೀಡಿದರು.
ಎಂ.,ಕೆ.ಗಣಪತಿ ಪ್ರಕರಣದಲ್ಲಿ ಬಿಜೆಪಿ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಳ್ಳು ಹೇಳುವುದು ಬಿಜೆಪಿ ಕಸುಬಾಗಿದೆ. ಹಿಂದೆ ಹಲವಾರು ಪ್ರಕರಣಗಳಲ್ಲೂ ಬಿಜೆಪಿ ಇದೇ ರೀತಿಯ ಸುಳ್ಳು ಹೇಳಿಕೆ ನೀಡಿದೆ ಎಂದು ಸಚಿವ ಜಾರ್ಜ್ ಕಿಡಿಕಾರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.