Select Your Language

Notifications

webdunia
webdunia
webdunia
webdunia

ನನ್ನ ಪರಿಸ್ಥಿತಿ ಅಡ್ವಾಣಿಯಂತಾಗಿದೆ: ಮಾಜಿ ಸಚಿವ ಖಾಡ್ಸೆ

ಏಕನಾಥ್ ಖಾಡ್ಸೆ
ಮುಂಬೈ , ಸೋಮವಾರ, 28 ಆಗಸ್ಟ್ 2017 (19:04 IST)
ಕಳೆದ ವರ್ಷ ಭ್ರಷ್ಟಾಚಾರ ಆರೋಪಗಳ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಮುಖಂಡ ಏಕನಾಥ್ ಖಾಡ್ಸೆ, ನನ್ನ ಪರಿಸ್ಥಿತಿ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯಂತಾಗಿದೆ ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದೆ.
ತವರುಕ್ಷೇತ್ರವಾದ ಜಲಗಾಂವ್‌‍ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದಲ್ಲಿ ನನ್ನ ಪರಿಸ್ಥಿತಿ ರಾಷ್ಟ್ರೀಯ ನಾಯಕ ಎಲ್.ಕೆ.ಆಡ್ವಾಣಿ ಅವರಂತಾಗಿದೆ. ಪಕ್ಷದ ಹಿರಿಯ ನಾಯಕರು ಮಾರ್ಗದರ್ಶನ ನೀಡಬೇಕು, ಪಕ್ಷಕ್ಕೆ ಬಂದ ಹೊಸ ನಾಯಕರು ಅಧಿಕಾರ ಅನುಭವಿಸಬೇಕು ಎನ್ನುವಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.  
 
ಭಾಷಣದಿಂದ ಆಕ್ರೋಶಗೊಂಡ ಬೆಂಬಲಿಗರು ಜಿಲ್ಲಾ ಘಟಕ ತೀರ್ಮಾನ ತೆಗೆದುಕೊಂಡು ಖಾಡ್ಸೆಯವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಘೋಷಣೆಗಳನ್ನು ಕೂಗಿದರು. 
 
ನಾನು ಹಲವು ವರ್ಷಗಳಿಂದ ರಾಜ್ಯ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದ ಬೆಳವಣಿಗೆಗೆ ಸಹಾಯ ಮಾಡಿದ್ದೇನೆ. ಅದರಂತೆ, ಆಡ್ವಾಣಿ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ. ಆದರೆ, ಇದೀಗ ಹಿರಿಯರು ಮಾರ್ಗದರ್ಶನ ನೀಡಬೇಕು, ಹೊಸಬರು ಅಧಿಕಾರ ಅನುಭವಿಸಬೇಕು ಎನ್ನುವಂತಾಗಿರುವುದು ವಿಷಾದನೀಯ ಎಂದು ಮಾಜಿ ಸಚಿವ ಏಕನಾಥ್ ಖಾಡ್ಸೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎಸಿಬಿ ಎಫ್‌ಐಆರ್ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್