Select Your Language

Notifications

webdunia
webdunia
webdunia
webdunia

ಎಸಿಬಿ ಎಫ್‌ಐಆರ್ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಎಸಿಬಿ ಎಫ್‌ಐಆರ್ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ಬೆಂಗಳೂರು , ಸೋಮವಾರ, 28 ಆಗಸ್ಟ್ 2017 (17:13 IST)
ಶಿವರಾಮ್ ಕಾರಂತ ಬಡಾವಣೆ ಡಿನೋಟಿಫಿಕೇಶನ್‌ ಕುರಿತಂತೆ ಎಸಿಬಿ ಸಲ್ಲಿಸಿದ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಹೈಕೋರ್ಟ್‌ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಬಿಎಸ್‌ವೈ ವಿರುದ್ಧ ಸದ್ಯ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವ ಎಸಿಬಿ ಪರ ವಕೀಲರ ಆಶ್ವಾಸನೆಯಿಂದಾಗಿ ಆಗಸ್ಟ್ 30 ರವರೆಗೆ ಮಧ್ಯಂತರ ಆದೇಶವನ್ನು ಕೋರ್ಟ್ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಮುಂಬರುವ ಆಗಸ್ಟ್ 30 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಕರಣದ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ. ಯಡಿಯೂರಪ್ಪ ಪರ ವಕೀಲರಾದ ಸಿ.ವಿ.ನಾಗೇಶ್ ಇಂದು ಕಕ್ಷಿದಾರರ ಪರ ವಾದ ಮಂಡಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಬಾಗೆ ಕೇವಲ 10 ವರ್ಷ ಸಜೆ: ಮೇಲ್ಮನವಿ ಸಲ್ಲಿಸಲಿರುವ ಸಂತ್ರಸ್ಥೆ