Select Your Language

Notifications

webdunia
webdunia
webdunia
webdunia

ಬಾಬಾ ರಾಮ್ ರಹೀಮ್‌ಗೆ 10 ವರ್ಷ ಜೈಲು ಶಿಕ್ಷೆ : ಸಿಬಿಐ ಕೋರ್ಟ್

ಬಾಬಾ ರಾಮ್ ರಹೀಮ್‌ಗೆ 10 ವರ್ಷ ಜೈಲು ಶಿಕ್ಷೆ : ಸಿಬಿಐ ಕೋರ್ಟ್
ರೋಹ್ಟಕ್ , ಸೋಮವಾರ, 28 ಆಗಸ್ಟ್ 2017 (15:30 IST)
ಸಾದ್ವಿ ಮೇಲೆ ನಿರಂತರವಾಗಿ ಮೂರು ವರ್ಷಗಳ ಕಾಲ ಅತ್ಯಾಚಾರವೆಸಗಿರುವ ಬಾಬಾ ಗುರ್ಮಿತ್ ರಾಮ್ ರಹೀಮ್‌ಗೆ ಸಿಬಿಐ ಕೋರ್ಟ್ 
ಸಿಬಿಐ ಕೋರ್ಟ್‌ನ ನ್ಯಾಯಮೂರ್ತಿ ಜಗದೀಪ್ ಸಿಂಗ್ ಇಂದು ತೀರ್ಪು ನೀಡಿ, ಅತ್ಯಾಚಾರ ಪ್ರಕರಣದಲ್ಲಿ ಬಾಬಾ ರಾಮ್ ರಹೀಮ್ ದೋಷಿಯಾಗಿದ್ದು 10 ವರ್ಷಗಳ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. 
 
ಬಾಬಾಗೆ ಕಠಿಣ ಜೀವಾವಧಿ ಶಿಕ್ಷೆ ನೀಡುವಂತೆ ಸಿಬಿಐ ಪರ ವಕೀಲರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.
 
ಕೋರ್ಟ್‌ನಲ್ಲಿ ತೀರ್ಪು ನೀಡುತ್ತಿದ್ದಂತೆ ಬಾಬಾ ರಾಮ್ ರಹೀಮ್ ಕಣ್ಣೀರಿಟ್ಟರೂ ನ್ಯಾಯಮೂರ್ತಿಗಳು, ತಮ್ಮ ತೀರ್ಪು ಪ್ರಕಟಿಸುವಲ್ಲಿ ಹಿಂದೇಟು ಹಾಕಲಿಲ್ಲ ಎಂದು ಮೂಲಗಳು ತಿಳಿಸಿವೆ.   
 
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಾಬಾ ರಾಮ್ ರಹೀಮ್ ದೋಷಿ ಎಂದು ಪ್ರಕಟವಾಗುತ್ತಿದ್ದಂತೆ ಬಾಬಾ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ 35ಕ್ಕೂ ಹೆಚ್ಚು ಜನ ಸಾವನ್ನಪ್ಪಿ 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ನೂರಾರು ಕೋಟಿ ರೂಪಾಯಿ ಆಸ್ತಿ ಪಾಸ್ತಿ ಹಾನಿಯಾಗಿತ್ತು.
 
ಪಂಚಕುಲಾ, ಸಿರ್ಸಾ ಸೇರಿದಂತೆ ಬಾಬಾ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಅನೇಕ ನಗರಗಳಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು ಕಂಡಲ್ಲಿ ಗುಂಡಿಕ್ಕಲು ಸೇನಾಪಡೆಗಳಿಗೆ ಆದೇಶ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

1069 ರೋಬೋಟ್`ಗಳ ಸಾಮೂಹಿಕ ನೃತ್ಯ ಗಿನ್ನಿಸ್ ದಾಖಲೆ ಸೇರ್ಪಡೆ