Select Your Language

Notifications

webdunia
webdunia
webdunia
webdunia

ಎನ್`ಕೌಂಟರ್ ಹೆಸರಲ್ಲಿ ಅಮಾಯಕರನ್ನ ಕೊಂದಿದ್ದ ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ

ಎನ್`ಕೌಂಟರ್ ಹೆಸರಲ್ಲಿ ಅಮಾಯಕರನ್ನ ಕೊಂದಿದ್ದ ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ
lucknow , ಬುಧವಾರ, 22 ಫೆಬ್ರವರಿ 2017 (22:09 IST)
1996ರ ಗಾಜಿಯಾಬಾದ್`ನ ನಕಲಿ ಎನ್`ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಸಿಬಿಐ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.  ಇನ್ಸ್`ಪೆಕ್ಟರ್, ಸಬ್ ಇನ್ಸ್`ಪೆಕ್ಟರ್ ಮತ್ತು ಇಬ್ಬರು ಪೇದೆಗಳು ಶಿಕ್ಷೆಗೊಳಗಾಗಿದ್ದಾರೆ. ಸಾಕ್ಷ್ಯ ನಾಶ, ತಪ್ಪು ಸಾಕ್ಷ್ಯ ನೀಡಿಕೆ ಆರೋಪದಡಿ ನಾಲ್ವರೂ ದೋಷಿಗಳೆಂದು ಫೆಬ್ರವರಿ 20 ರಂದೇ ಕೋರ್ಟ್ ತೀರ್ಪು ನೀಡಿತ್ತು. ಇವತ್ತು ಶಿಕ್ಷೆ ಪ್ರಕಟಿಸಿದೆ.


ನವೆಂಬರ್ 8 1996ರಂದು ಜಲಾಲುದ್ದೀನ್, ಜಸ್ಬೀರ್, ಅಶೋಕ್ ಮತ್ತು ಪ್ರವೇಜ್ ಎಂಬುವವರನ್ನ ಕ್ರಿಮಿನಲ್ಸ್ ಎಂಬ ಕಾರಣವೊಡ್ಡಿ ಎನ್`ಕೌಂಟರ್`ನಲ್ಲಿ ಕೊಲ್ಲಲಾಗಿತ್ತು. ನಾಲ್ವರೂ ಕೂಲಿ ಕಾರ್ಮಿಕರಾಗಿದ್ದು, ಭೋಜ್`ಪುರ ಠಾಣೆ ಮುಂದೆ ಟೀ ಅಂಗಡಿಯಲ್ಲಿ ಕುಳಿತಿದ್ದಾಗ ಠಾಣೆಗೆ ಎಳೆದೊಯ್ದ ಪೊಲೀಸರು ಚಿತ್ರಹಿಂಸೆ ನೀಡಿ ಬಳಿಕ ಗುಂಡಿಕ್ಕಿ ಕೊಂದಿದ್ದರು.

ಸತತ 2 ದಶಕಗಳ ವಿಚಾರಣೆ ಬಳಿಕ ಸಿಬಿಐ ಕೋರ್ಟ್ , ಇನ್ಸ್`ಪೆಕ್ಟರ್ ಲಾಲ್ ಸಿಂಗ್, ಸಬ್ ಇನ್ಸ್`ಪೆಕ್ಟರ್ ಜೋಗಿಂದರ್ ಸಿಂಗ್, ಸುರ್ಯಬನ್ ಮತ್ತು ಸುಭಾಶ್ ಚಂದ್ ಎಂಬ ಪೇದೆಗಳು ಜೀವಾವಧಿ ಶಿಕ್ಷೆ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರ್ಕಾರದಿಂದ ಹೈಕಮಾಂಡ್‌ಗೆ ಚೆಕ್ ಕಪ್ಪ: ಕುಮಾರಸ್ವಾಮಿ ಆರೋಪ