Publish Date: Mon, 28 Aug 2017 (11:27 IST)
Updated Date: Mon, 28 Aug 2017 (11:29 IST)
ಬೆಂಗಳೂರು: ರಾಜ್ಯದಲ್ಲಿ ಎಸಿಬಿಗೆ ಬಿಜೆಪಿ ನಾಯಕರೇ ಟಾರ್ಗೆಟ್ ಆಗುತ್ತಿರುವುದು ನೋಡಿದರೆ ನಮ್ಮನ್ನು ಸಿಕ್ಕಿಸಿ ಹಾಕುವುದಕ್ಕೇ ಕಾಂಗ್ರೆಸ್ ಸರ್ಕಾರ ಈ ಇಲಾಖೆ ಅಸ್ಥಿತ್ವಕ್ಕೆ ತಂದಿರುವ ಹಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
‘ಸಿಎಂ ಸಿದ್ದರಾಮಯ್ಯ ಮೇಲೆ ಎಸಿಬಿಯಲ್ಲಿ 25 ಪ್ರಕರಣಗಳು ದಾಖಲಾಗಿವೆ. ಆದರೆ ಒಂದಕ್ಕೂ ಎಫ್ ಐಆರ್ ಹಾಕಿಲ್ಲ. ಕೇವಲ ಬಿಜೆಪಿ ನಾಯಕರನ್ನೇ ಎಸಿಬಿ ಟಾರ್ಗೆಟ್ ಮಾಡುತ್ತಿದೆ’ ಎಂದು ಶೆಟ್ಟರ್ ಕಿಡಿ ಕಾರಿದ್ದಾರೆ.
ಈ ನಡುವೆ ದಲಿತ ಕುಟುಂಬದವರಿಗೆ ತಮ್ಮ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿರುವ ಬಿಎಸ್ ಯಡಿಯೂರಪ್ಪನವರನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯನವರೇ ದಲಿತ ಕುಟುಂಬದ ಹೆಣ್ಣು ಮಗಳನ್ನು ವಿವಾಹವಾಗಿ ಎಂದು ಕರೆ ನೀಡಿದ್ದಾರೆ. ಹಾಗಿರುವಾಗ ದಲಿತ ಕುಟುಂಬದವರನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವುದು ತಪ್ಪಾ ಎಂದಿದ್ದಾರೆ.