Select Your Language

Notifications

webdunia
webdunia
webdunia
webdunia

ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್

ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾದ ಲಾಲೂ ಪ್ರಸಾದ್ ಯಾದವ್
ನವದೆಹಲಿ , ಸೋಮವಾರ, 28 ಆಗಸ್ಟ್ 2017 (10:23 IST)
ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಾವು ಆಯೋಜಿಸಿದ್ದ ಬಿಜೆಪಿ ವಿರೋಧಿ ಆಂದೋಲನದ ಸಮಾವೇಶದ ತಿರುಚಿದ ಫೋಟೋ ಪ್ರಕಟಿಸಿ ತಮಾಷೆಗೊಳಗಾಗಿದ್ದಾರೆ.

 
ನಿನ್ನೆ ಪ್ರತಿಪಕ್ಷಗಳು ಲಾಲೂ ನೇತೃತ್ವದಲ್ಲಿ ಪಾಟ್ನಾದಲ್ಲಿ ಸಮಾವೇಶವೊಂದನ್ನು ಏರ್ಪಡಿಸಿದ್ದರು. ಇದಕ್ಕೆ ಶರದ್ ಯಾದವ್,  ಅಖಿಲೇಶ್ ಯಾದವ್ ರಂತಹ ಲಾಲೂ ಮಿತ್ರ ನಾಯಕರೂ ಆಗಮಿಸಿದ್ದರು.

ಈ ಸಮಾವೇಶದ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಒಂದನ್ನು ಲಾಲೂ ಪ್ರಕಟಿಸಿದ್ದರು. ಅಲ್ಲದೆ, ಲಾಲೂ ಎದುರುಗಡೆ ಯಾವ ಮುಖವೂ ನಿಲ್ಲಲ್ಲ. ಎಷ್ಟು ಜನ ಇದ್ದಾರೆಂದು ನೀವೇ ಲೆಕ್ಕ ಮಾಡಿ ಎಂದೂ ಬರೆದುಕೊಂಡಿದ್ದರು.

ಆದರೆ ಈ ಫೋಟೋದ ಬಗ್ಗೆ ಅನುಮಾನಗಳು ಮೂಡಿದ್ದವು. ನಂತರ ಇದು ಲಾಲೂ ಬೆಂಬಲಿಗರು ಫೋಟೋಶಾಪ್ ನಲ್ಲಿ ಲಕ್ಷಾಂತರ ಜನರನ್ನು ಕಾಣುವಂತೆ ತಿರುಚಿದ ಫೋಟೋ ಎಂದು ತಿಳಿದುಬಂತು. ಇದಾದ ಮೇಲೆ ಲಾಲೂ ಮೇಲೆ ಟೀಕೆಗಳ ಸುರಿಮಳೆಯಾಯ್ತು.

ಇದನ್ನೂ ಓದಿ.. ಪಿವಿ ಸಿಂಧು ಭರ್ಜರಿ ಆಟ ನೋಡಿ ಸೈನಾ ನೆಹ್ವಾಲ್ ಪ್ರತಿಕ್ರಿಯೆ ಏನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೇರಾ ಬಾಬಾ ತಪ್ಪಿಸಿಕೊಳ್ಳಲು ನಡೆದಿತ್ತಾ ಸಂಚು?!