Publish Date: Sun, 27 Aug 2017 (16:58 IST)
Updated Date: Sun, 27 Aug 2017 (17:00 IST)
ಅಭಿಮಾನಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕುರಿ ಮತ್ತು ಕಂಬಳಿಯನ್ನು ಗಿಫ್ಟ್ ನೀಡಿದ ಘಟನೆ ವರದಿಯಾಗಿದೆ.
ನಗರದಲ್ಲಿ ಆಯೋಜಿಸಲಾದ ಕುರುಬರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯರಿಗೆ ಅಭಿಮಾನಿ ಅಂಜನೇಯ ಕುರಿ ಮತ್ತು ಕಂಬಳಿ ಗಿಫ್ಟ್ ನೀಡಿ ಅಭಿಮಾನವನ್ನು ಮೆರೆದಿದ್ದಾರೆ.
ಅಭಿಮಾನಿ ಅಂಜನೇಯ ನೀಡಿದ ಕೊಡುಗೆಯನ್ನು ನಮ್ರತೆಯಿಂದ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ಅಂಜನೇಯ ಅಭಿಮಾನವನ್ನು ಕೊಂಡಾಡಿದರು.
ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಕಾಂಗ್ರೆಸ್ ಮತ್ತೆ ಸರಕಾರ ರಚಿಸಲಿದೆ. ಕುರುಬ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.