Select Your Language

Notifications

webdunia
webdunia
webdunia
webdunia

ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕಿ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧವೇ ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
 ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದ ಜಾರಕಿಹೊಳಿ, 100 ರೂ ಸೀರೆ ಹಂಚಿದರೆ ಮತ ಹಾಕಲ್ಲ. ನೀವು 100 ರೂ ಸೀರೆ ಹಂಚಿದರೆ ನಾನು 200 ರೂ. ಸೀರೆ ಹಂಚುತ್ತೇನೆ. ನನ್ನ ಬಳಿ ಎಲ್ಲವೂ ಇದೆ ಎಂದು ತಿರುಗೇಟು ನೀಡಿದ್ದಾರೆ.
 
ಎಐಸಿಸಿ ಸದಸ್ಯನಾಗಿ ಆಯ್ಕೆಯಾದ ನಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ತಮ್ಮನ್ನು ಸನ್ಮಾನಿಸದಿರುವುದು ಜಾರಕಿಹೊಳಿ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
 
 ಈ ಬಾರಿ ರಾಜಕೀಯ ಮಾಡಲು ಆಗೋಲ್ಲ, ನಿಮ್ಮ ಸವಾಲ್‌ಗೆ ಪ್ರತಿ ಸವಾಲ್‌ ಹಾಕುತ್ತೇನೆ ಎಂದು ಗುಡುಗಿದ್ದಾರೆ. 
 
ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ನಮ್ಮ ಸಹೋದರನಿಗೆ ಸಚಿವ ಸ್ಥಾನ ಕೊಡಿಸಿರುವ ಹಿಂದೆ ಹೆಬ್ಬಾಳ್ಕರ್ ಕೈವಾಡವಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಕುರಿ ಗಿಫ್ಟ್ ನೀಡಿದ ಅಭಿಮಾನಿ