Select Your Language

Notifications

webdunia
webdunia
webdunia
webdunia

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ದೇವೇಗೌಡ

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ದೇವೇಗೌಡ
ಬೆಂಗಳೂರು , ಸೋಮವಾರ, 28 ಆಗಸ್ಟ್ 2017 (14:07 IST)
ಎರಡೂ ರಾಷ್ಟ್ರೀಯ ಪಕ್ಷಗಳು ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿವೆ. ಪ್ರಾದೇಶಿಕ ಪಕ್ಷವಾಗಿ ನಾವು ಸುಮ್ಮನಿದ್ದರೆ ಹಿಂದೆ ಬೀಳುತ್ತೇವೆ. ಹೀಗಾಗಿ, ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವೇಗೌಡರು, ಆರ್ಥಿಕವಾಗಿ ಪಕ್ಷ ದುರ್ಬಲವಾಗಿರುವುದು ನಿಜ. ಆದರೆ, ಸಾಮೂಹಿಕ ಹೋರಾಟ ನಡೆಸುತ್ತೇವೆ. ಈ ಹಿಂದೆ ಎಸ್.ಎಂ. ಕೃಷ್ಣ ಪಾಂಚಜನ್ಯ ಊದಿದ್ದರು. ಅವರು ಪಾಂಜಜನ್ಯಾದರೂ ಊದಲಿ, ಶಂಕನಾದರೂ ಊದಲಿ ನಾವು ಏನನ್ನೂ ಊದುವುದಿಲ್ಲ ಕೆಚ್ಚೆದೆಯ ಹೋರಾಟ ನಡೆಸುತ್ತೇವೆ ಎಂದು ದೇವೇಗೌಡರು ಹೇಳಿದ್ಧಾರೆ. ಅಧ್ಯಕ್ಷ, ಕಾರ್ಯಾಧ್ಯಕ್ಷ, ಕಾರ್ಯರರ್ಶಿ ಸ್ಥಾನಗಳಿಗೆ ಮಬದಲಾವಣೆ ಮಾಡುವುದಿಲ್ಲ. ಪದಾಧಿಕಾರಿಗಳ ಪಟ್ಟಿ ಪ್ರಕಟಿಸುತ್ತೇವೆ. ಸೆಪ್ಟೆಂಬರ್ 22 ರಂದು ಬೃಹತ್ ಸಮಾವೇಶ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಇದೇವೇಳೆ, ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ 7 ತಂಡಗಳನ್ನ ರಚಿಸಲಾಗಿದ್ದು, 2 ವಾರಗ>ಳಿಗೊಮ್ಮೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸುವುದಾಗಿ ದೇವೇಗೌಡರು ಹೇಳಿದ್ದಾರೆ. ಹಲವು ತಿಂಗಳೂಗಳ ಹಿಂದೆಯೇ ಅಭ್ಯರ್ಥಿಗಳ ಪಟ್ಟಿ ಸಹ ಸಿದ್ಧವಾಗಿತ್ತು. ಆದರೆ, ಕುಮಾರಸ್ವಾಮಿಯವರನ್ನ ನಾನೇ ತಡೆದೆ. ಬೇರೆ ಪಕ್ಷಗಳ ನಡೆ ನೋಡಿಕೊಂಡು ನಿರ್ಣಯ ಕೈಗೊಳ್ಳುತ್ತೇವೆ. ಅಭ್ಯರ್ಥಿಗಳ ಹೆಸರು ಪ್ರಕಟಿಸುವ ದಿನಾಂಕ ನಾನೇ ಪ್ರಕಟಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಬಂದಿವೆ 200, 50 ರೂ. ಹೊಸ ನೋಟು: ನೋಟು ಪಡೆಯಲು ಮುಗಿಬಿದ್ದ ಜನ