Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಗೆ ಟಿಕೆಟ್ ಜೊತೆ ಮೊಬೈಲ್ ನಂಬರ್ ಕೊಟ್ಟ ಕಾಮುಕ ಕಂಡಕ್ಟರ್!

ವಿದ್ಯಾರ್ಥಿನಿಗೆ ಟಿಕೆಟ್ ಜೊತೆ ಮೊಬೈಲ್ ನಂಬರ್ ಕೊಟ್ಟ ಕಾಮುಕ ಕಂಡಕ್ಟರ್!
ಮಂಗಳೂರು , ಸೋಮವಾರ, 25 ಏಪ್ರಿಲ್ 2022 (09:58 IST)
ಮಂಗಳೂರು: ಬಸ್ ಹತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಟಿಕೆಟ್ ಜೊತೆ ಮೊಬೈಲ್ ನಂಬರ್ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕನನ್ನು ಬಂಧಿಸಲಾಗಿದೆ.

8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ನಿರ್ವಾಹಕ ಮಂಜುನಾಥ್ (21) ಎಂಬಾತ ಟಿಕೆಟ್ ಜೊತೆ ತನ್ನ ಮೊಬೈಲ್ ನಂಬರ್ ಕೂಡಾ ಬರೆದುಕೊಟ್ಟಿದ್ದ. ಈ ವಿಚಾರವನ್ನು ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿದ್ದಳು.

ಅದರಂತೆ ಪೋಷಕರು ಹಾಗೂ ಸ್ಥಳೀಯರು ಬಸ್ ನ್ನು ಅಡ್ಡಗಟ್ಟಿ ನಿಲ್ಲಿಸಿ ನಿರ್ವಾಹಕನನ್ನು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಹಿಡಿದೊಪ್ಪಿಸಿದ್ದಾರೆ. ಈ ಹಿಂದೆಯೂ ಈತ ಇಂತಹ ಕೃತ್ಯವೆಸಗಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ 4ನೇ ಅಲೆ : ಇಂದು ಮಹತ್ವದ ಸಭೆ