ಬೆಂಗಳೂರು: ಹೆಂಡತಿಯ ಬಯಕೆ ಪೂರೈಸಲು ಪತಿ ಕಳ್ಳತನಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಹೈದರಾಬಾದ್ ಮೂಲದ ವಿನೋದ್ ಕುಮಾರ್ ಎಂಬಾತ ಬಂಧಿತ. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಳಿಕ ಮದುವೆಯಾಗಿ ಬೆಂಗಳೂರಿನಲ್ಲಿ ಶಿಫ್ಟ್ ಆಗಿದ್ದರು.
ಬಳಿಕ ಪತ್ನಿಗೆ ಗಂಡ ತರುತ್ತಿದ್ದ ಅಲ್ಪ ಸಂಪಾದನೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಪತ್ನಿಯ ಬಯಕೆ ಪೂರೈಸಲು ಪತಿ ಕಳ್ಳತನಕ್ಕಿಳಿದಿದ್ದ. ಆದರೆ ಈ ಬಾರಿ ಮೊಬೈಲ್ ಕಳ್ಳತನ ಮಾಡುವಾಗ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.