Publish Date: Mon, 25 Apr 2022 (08:30 IST)
Updated Date: Mon, 25 Apr 2022 (08:41 IST)
ನವದೆಹಲಿ: ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಿಯಕರ ಬಳಿಕ ಆಕೆಯ ಮೃತದೇಹವನ್ನು ಮಣ್ಣು ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.
ಮಹಿಳೆ ತನ್ನ ಗಂಡನಿಂದ ಪ್ರತ್ಯೇಕವಾಗಿದ್ದು, ಇದೀಗ ಕೆಲವು ಸಮಯದಿಂದ ಆರೋಪಿ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಳು. ಆದರೆ ಇಬ್ಬರ ನಡುವೆ ಕಿತ್ತಾಟವಾಗಿದ್ದು ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಮೃತದೇಹವನ್ನು ಮಣ್ಣು ಮಾಡಿದ್ದಾನೆ.
ಆದರೆ ಪೊಲೀಸರಿಗೆ ಅನಾಮಿಕ ಕರೆಯೊಂದು ಬಂದಿದ್ದು, ಈ ಸಾವಿನ ಬಗ್ಗೆ ಸುಳಿವು ಸಿಕ್ಕಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹವನ್ನು ಮಣ್ಣು ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಇದು ಸಹಜ ಸಾವಾಗಿತ್ತು ಎಂದು ನಾಟಕವಾಡಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಕೊನೆಗೂ ಸತ್ಯ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.