Publish Date: Sat, 23 Apr 2022 (09:00 IST)
Updated Date: Sat, 23 Apr 2022 (09:09 IST)
ಭುವನೇಶ್ವರ್: ಗಂಡನನ್ನು ಕೊಲ್ಲಲು ಹೆಂಡತಿಯೇ ಸುಪಾರಿ ಕೊಟ್ಟ ಘಟನೆ ಘಟನೆ ಒಡಿಶ್ಶಾದಲ್ಲಿ ನಡೆದಿದೆ.
ತನ್ನ ಚಾಲಕನ ಜೊತೆಗೇ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು 1 ಲಕ್ಷ ರೂ. ಗೂಂಡಾಗಳಿಗೆ ಸುಪಾರಿ ನೀಡಿದ್ದಳು.
ಅದರಂತೆ ಗೂಂಡಾಗಳು ಕೊಲೆ ನಡೆಸುವ ಉದ್ದೇಶದಿಂದ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾಗಳ ಪೈಕಿ ಒಬ್ಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಇದರಿಂದಾಗಿ ಕೊಲೆಯ ಪ್ಲ್ಯಾನ್ ಬಹಿರಂಗವಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.