ಚಾಮರಾಜನಗರ: ನಡು ರಸ್ತೆಯಲ್ಲೇ ಬೈಕ್ ನಲ್ಲಿ ಸಾಗುವಾಗ ಸಿನಿಮೀಯ ಶೈಲಿಯಲ್ಲಿ ಲಿಪ್ ಲಾಕ್ ಮಾಡಿದ ಪ್ರೇಮಿಗಳಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ಪಲ್ಸರ್ ಬೈಕ್ ನಲ್ಲಿ ತೆರಳುವಾಗ ಜೋಡಿ ಸಿನಿಮಾ ಶೈಲಿಯಲ್ಲಿ ಲಿಪ್ ಲಾಕ್ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರೇಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ, ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.