Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕು ಮತ್ತೊಷ್ಟು ಏರಿಕೆ !

ಕೊರೊನಾ ಸೋಂಕು ಮತ್ತೊಷ್ಟು ಏರಿಕೆ !
ಲಕ್ನೋ , ಸೋಮವಾರ, 25 ಏಪ್ರಿಲ್ 2022 (13:32 IST)
ಲಕ್ನೋ : ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಲ್ಲಿನ ಗೌತಮಬುದ್ಧ ಜಿಲ್ಲೆಯೊಂದರಲ್ಲೇ ಒಟ್ಟು ಸೋಂಕಿತರ ಶೇ.50 ರಷ್ಟು ಪ್ರಕರಣಗಳು ಪತ್ತೆಯಾಗಿದೆ.
 
ಉತ್ತರಪ್ರದೇಶದ ಒಟ್ಟು 980 ಪ್ರಕರಣಗಳ ಪೈಕಿ 529 ಪ್ರಕರಣ ಜಿಲ್ಲೆಯೊಂದರಲ್ಲೇ ಇದೆ ಎಂದು ಹೇಳಲಾಗಿದೆ.

24 ಗಂಟೆಯಲ್ಲಿ ಇದೊಂದೇ ಜಿಲ್ಲೆಯಲ್ಲಿ 103 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 529ಕ್ಕೆ ಏರಿಕೆಯಾಗಿದೆ.

ಕೆಲ ದಿನಗಳಿಂದ ಈಚೆಗೆ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಸರ್ಕಾರ ಹಾಗೂ ಆರೋಗ್ಯಾಧಿಕಾರಿಗಳು ಯಾವುದೇ ಭಯವಿಲ್ಲ ಎನ್ನುತ್ತಿದ್ದಾರೆ.

ಲಸಿಕೆ ಪಡೆಯದಿರುವುದು ಹಾಗೂ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಇನ್-ಸ್ಟಂಟ್ ಡೆಲಿವರಿ ಇಲ್ಲ!