Publish Date: Mon, 25 Apr 2022 (08:40 IST)
Updated Date: Mon, 25 Apr 2022 (08:46 IST)
ನವದೆಹಲಿ: ತನ್ನನ್ನು ಕಡೆಗಣಿಸುತ್ತಾಳೆಂಬ ಆಕ್ರೋಶಕ್ಕೆ ಪ್ರಿಯಕರ ಪ್ರೇಯಸಿಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ವಿವಾಹಿತನಾಗಿದ್ದ ಆರೋಪಿಗೆ ಇಬ್ಬರು ಮಕ್ಕಳೂ ಇದ್ದರು. ಹೀಗಿದ್ದರೂ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ.
ಆದರೆ ಇತ್ತೀಚೆಗೆ ಆಕೆ ತನ್ನನ್ನು ಕಡೆಗಣಿಸುತ್ತಾಳೆಂದು ಆಕ್ರೋಶಗೊಂಡಿದ್ದ ಆರೋಪಿ ಆಕೆಗೆ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.