Publish Date: Mon, 22 Jul 2019 (17:04 IST)
Updated Date: Mon, 22 Jul 2019 (17:06 IST)
ಕಿರಿಕ್ ಪಾರ್ಟಿ ಬೆಡಗಿ ಹಾಗೂ ಮಾದಕ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರ ಆಕ್ರೋಶ ದಿನೆ ದಿನೇ ಹೆಚ್ಚಾಗುತ್ತಿದೆ.
ಈ ಮೊದಲು ಬ್ರೇಕ್ ಅಪ್, ಆ ಬಳಿಕ ಲಿಪ್ ಲಾಕ್ ಸೀನ್ ಗಳಿಂದ ಸುದ್ದಿಯಾಗಿದ್ ರಶ್ಮಿಕಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ನನಗೆ ಮಾತನಾಡಲು ಕನ್ನಡ ಕಷ್ಟವಾಗುತ್ತೆ. ಕನ್ನಡ ಮಾತನಾಡೋಕೆ ಬರಲ್ಲ ಅಂತ ನಟಿ ರಶ್ಮಿಕಾ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ರು.
ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ರಶ್ಮಿಕಾ ಅಭಿನಯದ ಕನ್ನಡ ಚಿತ್ರಗಳನ್ನ ರಾಜ್ಯದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬಾರದೆಂದು ಮನವಿ ಮಾಡಿದ್ದಾರೆ.