Publish Date: Fri, 19 Jul 2019 (19:00 IST)
Updated Date: Fri, 19 Jul 2019 (19:02 IST)
ಬಿಡುಗಡೆಗೂ ಮುನ್ನವೇ ನಗ್ನ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನಿಂದ ಸುದ್ದಿ ಮಾಡಿರುವ ‘ಅದಾಯಿ’ ಚಿತ್ರದ ನಾಯಕಿ ಅಮಲಾ ಪೌಲ್ ವಿರುದ್ಧ ಕೇಸ್ ಬಿದ್ದಿದೆ.
ಚಿತ್ರದಲ್ಲಿ ವಿವಸ್ತ್ರಳಾಗಿ ಕಾಣಿಸಿಕೊಂಡಿರೋ ಕಾರಣಕ್ಕೆ ಅಮಲಾ ಪೌಲ್ ವಿರುದ್ಧ ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಕೇಸ್ ಹಾಕಿದ್ದಾರೆ.
ಅದಾಯಿ ಚಿತ್ರದ ಪೋಸ್ಟರ್ ಗಳಲ್ಲಿ ಅಮಲಾ ಪೌಲ್ ನಗ್ನಳಾಗಿ ನಟಿಸಿದ್ದಾರೆ. ಅವರು ಮಾಡಿದ್ದು ನಮ್ಮ ಸಂಸ್ಕೃತಿಗೆ ವಿರೋಧದಂತಿದೆ ಎಂದು ದೂರಲಾಗಿದೆ.
ಅಮಲಾ ಪೌಲ್ ಹಣಕ್ಕಾಗಿ ಏನು ಮಾಡೋಕೆ ಯೋಚನೆ ಮಾಡೋಲ್ಲ ಅಂತ ದೂರುದಾರರು ನಟಿ ವಿರುದ್ಧ ಗಂಭೀರ ಟೀಕೆ ಹಾಗೂ ಆರೋಪ ಮಾಡಿದ್ದಾರೆ.