ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ಹಾಕಿದ್ದೇನು?

ಶುಕ್ರವಾರ, 19 ಜುಲೈ 2019 (18:51 IST)
ಅತ್ಯಾಚಾರ ಮಾಡಿದ್ದಲ್ಲದೇ ಮಹಿಳೆಯ ಗುಪ್ತಾಂಗಕ್ಕೆ ಮಾಡಬಾರದ ಕೆಟ್ಟ ಕೆಲಸವನ್ನ ವಿಕೃತ ಕಾಮುಕನೊಬ್ಬ ಮಾಡಿರೋ ಘಟನೆ ನಡೆದಿದೆ.

ವೃದ್ಧೆಯೊಬ್ಬರ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ಬಳಿಕ ಆಕೆಯ ಗುಪ್ತಾಂಗಕ್ಕೆ ಗಾಯ ಮಾಡಿದ್ದಲ್ಲದೇ ಕಟ್ಟಿಗೆಯನ್ನು ಹಾಕಿ ಪೈಶಾಚಿಕ ಕೆಲಸ ಮಾಡಿದ್ದಾನೆ.

ಒಡಿಶಾದ ಸಾಂಬಲ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ವೃದ್ಧೆ ಹಾಗೂ ಅತ್ಯಾಚಾರ ಮಾಡಿರೋ ಆರೋಪಿ ಒಂದೇ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ವೃದ್ಧೆಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನೈತಿಕ ಸಂಬಂಧ: ಪ್ರಿಯತಮೆಗೆ ಏನ್ ಮಾಡಿದ ಗೊತ್ತಾ?