Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ: ಪ್ರಿಯತಮೆಗೆ ಏನ್ ಮಾಡಿದ ಗೊತ್ತಾ?

ಪ್ರಿಯಕರ
ಮುಂಬೈ , ಶುಕ್ರವಾರ, 19 ಜುಲೈ 2019 (16:29 IST)
ಅನೈತಿಕ ಸಂಬಂಧ ಮುಂದುವರಿಸಲು ಒಪ್ಪದ ಪ್ರಿಯತಮೆಯ ಮನೆಗೆ ಪ್ರಿಯಕರನೊಬ್ಬ ಬೆಂಕಿಯಿಟ್ಟ ಘಟನೆ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ವರದಿಯಾಗಿದೆ.
ಆರೋಪಿ ದೀಪಕ್ ಜೈನ್ 30 ವರ್ಷದ ಮಹಿಳೆಯೊಂದಿಗೆ ಕೆಲ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನು. ಆದರೆ, ಕೆಲ ಕಾರಣಗಳಿಂದಾಗಿ ಇತ್ತೀಚೆಗೆ ಮಹಿಳೆ ಆತನಿಂದ ದೂರವಾಗಿದ್ದಳು. ಇನ್ಮುಂದೆ ದೂರವಿರುವಂತೆ ಸಲಹೆ ನೀಡಿದ್ದಳು.
 
ಆದರೆ, ಆರೋಪಿ ದೀಪಕ್ ಸಂಬಂಧವನ್ನು ಮುಂದುವರಿಸುವಂತೆ ಮಹಿಳೆಯನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
 
ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಮಹಿಳೆಯ ಮನೆಗೆ ಬಂದ ದೀಪಕ್, ಸಂಬಂಧವನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಕೂಡಲೇ ಮನೆಯಿಂದ ಹೊರಹೋಗುವಂತೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ದೀಪಕ್ ತನ್ನಲ್ಲಿದ್ದ ಲೈಟರ್‌ನಿಂದ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾನೆ.
 
ದೀಪಕ್ ವರ್ತನೆಯಿಂದ ಭಯಗೊಂಡ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಒಶಿವಾರಾ ಠಾಣೆಯ ಪೊಲೀಸರು ಆರೋಪಿ ದೀಪಕ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ದೀಪಕ್ ವಿರುದ್ಧ ಹತ್ಯೆ, ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಅಸಭ್ಯ ವರ್ತನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರಿಗೆ ಈಗ ಜ್ಞಾನದೋಯವಾಗಿದೆ ಎಂದ ಸಿಎಂ