Publish Date: Tue, 16 Jul 2019 (09:10 IST)
Updated Date: Tue, 16 Jul 2019 (09:12 IST)
ಬೆಂಗಳೂರು: ಲೈಂಗಿಕ ಕಾಮನೆಗಳನ್ನು ಹತ್ತಿಕ್ಕಲು ಪೋರ್ನ್ ಸೈಟ್ ಗಳನ್ನು ನೋಡುವ ವಿಚಾರದಲ್ಲಿ ಮಹಿಳೆಯರೂ ಪುರುಷರಿಗಿಂತ ಕಡಿಮೆಯೇನಲ್ಲ. ಆದರೆ ಇದರಿಂದಾಗಿ ಅವರ ಲೈಂಗಿಕ ಜೀವನ ಹಾಳಾಗುತ್ತದಂತೆ!
ಅಧ್ಯಯನ ವರದಿಯೊಂದರ ಪ್ರಕಾರ ಪೋರ್ನ್ ಅಥವಾ ನೀಲಿ ಚಿತ್ರಗಳನ್ನು ನೋಡುವುದರಿಂದ ಮಹಿಳೆಯರು ತಮ್ಮ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಾರಂತೆ. ಆ ಚಿತ್ರಗಳಲ್ಲಿ ಬರುವ ಹಾಗೆ ತಮಗೆ ದೇಹ ಸೌಂದರ್ಯವಿಲ್ಲ, ಅದರಿಂದಾಗಿ ತಮ್ಮ ಸಂಗಾತಿಗೆ ಅಷ್ಟು ಸುಖ ಕೊಡಲು ಸಾದ್ಯವಿಲ್ಲ ಎಂಬ ಭ್ರಮೆಯಲ್ಲಿರುತ್ತಾರಂತೆ. ಇದರಿಂದ ಅವರಿಗೆ ಲೈಂಗಿಕ ಜೀವನದ ಮೇಲೂ ಆಸಕ್ತಿ ಕುಂದುತ್ತದೆ ಎಂದು ತಜ್ಞರು ಹೇಳುತ್ತಾರೆ.