Publish Date: Mon, 07 May 2018 (09:35 IST)
Updated Date: Mon, 07 May 2018 (09:37 IST)
ಬೆಂಗಳೂರು: ಬಿಜೆಪಿ ಸಮಾವೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಪ್ರಧಾನಿ ಮೋದಿ, ಯಡಿಯೂರಪ್ಪಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಸಾರವಾಗುವ ಪತ್ರಿಕೆಗಳಿಗೆ ಜಾಹೀರಾತು ನೀಡಿರುವ ಸಿಎಂ ಸಿದ್ದರಾಮಯ್ಯ, ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.
‘ನನ್ನ ಸ್ಪರ್ಧೆ ಮೋದಿ ಜತೆಗಲ್ಲ. ಯಡಿಯೂರಪ್ಪ ಜತೆಗೆ. ನನ್ನ ಸರ್ಕಾರದ ವಿರುದ್ಧ ಸುಖಾ ಸುಮ್ಮನೇ ಭ್ರಷ್ಟಾಚಾರ ಆರೋಪ ಮಾಡುವುದರ ಬದಲು ನೇರವಾಗಿ ಚರ್ಚೆ ಮಾಡೋಣ. ಬಹಿರಂಗ ವೇದಿಕೆಗೆ ಮೋದಿಯೂ ಬರಲಿ, ಯಡಿಯೂರಪ್ಪನವರೂ ಬರಲಿ. ಅಂಕಿ ಅಂಶಗಳ ಚರ್ಚೆ ಮಾಡೋಣ. ಯಾರು ಸರಿ ಯಾರು ಸುಳ್ಳು ಎಂದು ಗೊತ್ತಾಗಲಿ’ ಎಂದು ಸಿಎಂ ಜಾಹೀರಾತು ಮೂಲಕ ಪಂಥಾಹ್ವಾನ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.