Publish Date: Mon, 07 May 2018 (07:57 IST)
Updated Date: Mon, 07 May 2018 (07:59 IST)
ಬೆಂಗಳೂರು: ಪದೇ ಪದೇ ಸಿಎಂ ಸಿದ್ದರಾಮಯ್ಯರದ್ದು ಭ್ರಷ್ಟ ಸರ್ಕಾರ ಎನ್ನುವ ಬಿಜೆಪಿ ನಾಯಕರಿಗೆ ಸ್ವತಃ ಸಿಎಂ ಸಿದ್ದು ಗುದ್ದು ನೀಡಿದ್ದಾರೆ.
‘ನಾವು ಎಲ್ಲಾ ಜಾತಿಯವರನ್ನು ಒಂದೇ ದೃಷ್ಟಿಯಿಂದ ನೋಡುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಿಯಲ್ಲಿ ಮಾತ್ರ ಹೇಳಲ್ಲ. ಬಿಜೆಪಿಯವರು 224 ಕ್ಷೇತ್ರಗಳಲ್ಲಿ ಒಂದಾದರೂ ಮುಸ್ಲಿಮರಿಗೆ ಟಿಕೆಟ್ ನೀಡಿದ್ದಾರಾ? ನಾನು ಭ್ರಷ್ಟಾಚಾರ ಮಾಡಿದ್ದರೆ ಕೇಂದ್ರ ಸರ್ಕಾರ ಇಷ್ಟು ದಿನ ಸುಮ್ಮನಿರುತ್ತಿತ್ತಾ? ನನ್ನನ್ನು ಬಲಿ ಹಾಕುತ್ತಿದ್ದರು’ ಎಂದು ಸಿಎಂ ಹೇಳಿದ್ದಾರೆ.
ಇನ್ನು ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ‘ಜೆಡಿಎಸ್ ಗೆ ಇಡೀ ಕರ್ನಾಟಕದಲ್ಲಿ ಗೆಲ್ಲುವ ತಾಕತ್ತಿಲ್ಲ. ಮೈಸೂರಿನ ನಾಲ್ಕೈದು ಕಡೆ ಮಾತ್ರ ಅವರ ಆಟ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.