Select Your Language

Notifications

webdunia
webdunia
webdunia
webdunia

ಅಭಿಮಾನಿಯ ಟ್ಯಾಟೂ ಹುಚ್ಚಿಗೆ ಕರಗಿದ ಮೋದಿ

ಅಭಿಮಾನಿಯ ಟ್ಯಾಟೂ ಹುಚ್ಚಿಗೆ ಕರಗಿದ ಮೋದಿ
ರಾಯಚೂರು , ಸೋಮವಾರ, 7 ಮೇ 2018 (07:37 IST)
ರಾಯಚೂರು: ರಾಜಕಾರಣಿಗಳ ಮೇಲೂ ಹುಚ್ಚು ಪ್ರೀತಿ ತೋರುವ ಅಭಿಮಾನ ತೋರುವವರಿಗೇನೂ ಕಮ್ಮಿಯಿಲ್ಲ. ಪ್ರಧಾನಿ ಮೋದಿಯೂ ಇದಕ್ಕೆ ಹೊರತಲ್ಲ.

ರಾಯಚೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿರಬೇಕಾದರೆ ಅಂಗಿ ಬಿಚ್ಚಿ ಟ್ಯಾಟೂ ಪ್ರದರ್ಶಿಸಿದ ಅಭಿಮಾನಿಯೊಬ್ಬ ಪ್ರಧಾನಿ ಮೋದಿ ಗಮನ ಸೆಳೆದರು. ಉರಿ ಬಿಸಿಲಿಗೆ ತಮ್ಮ ಬೆನ್ನ ಮೇಲೆ ಪ್ರಧಾನಿ ಮೋದಿ ಮುಖಚಿತ್ರವಿರುವ ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ಮೋದಿ ಗಮನ ಸೆಳೆಯಲು ಪ್ರಯತ್ನಪಡುತ್ತಿದ್ದ. ಇದು ಮೋದಿ ಕಣ್ಣಿಗೆ ಬಿತ್ತು.

‘ಸಹೋದರ ನಿಮ್ಮ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಅಭಿಮಾನಕ್ಕೆ ಚಿರ ಋಣಿ. ಆದರೆ ದಯವಿಟ್ಟು ಅಂಗಿ ಹಾಕಿಕೊಳ್ಳಿ. ನಾನು ನಿಮ್ಮನ್ನು ಗಮನಿಸಿದ್ದೇನೆ. ದಯವಿಟ್ಟು ಹೀಗೆಲ್ಲಾ ಮಾಡಬೇಡಿ. ಈ ರೀತಿ ಹಚ್ಚೆ ಹಾಕಿಸಿಕೊಳ್ಳಲು ನೀವು ಎಷ್ಟು ಗಂಟೆ ವ್ಯಯಿಸಿರುತ್ತೀರಿ ಎಂದು ನನಗೆ ಗೊತ್ತು. ದಯವಿಟ್ಟು ನಿಮ್ಮ ಶ್ರಮವನ್ನು ಈ ರೀತಿ ವ್ಯರ್ಥ ಮಾಡಬೇಡಿ’ ಎಂದು ಮೋದಿ ಭಾಷಣದ ನಡುವೆಯೇ ಅಭಿಮಾನಿಗೆ ತಿಳಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಗೆ ಕೂತಿದ್ದಕ್ಕೆ ಕಾರು ಬದಲಾಯಿಸಿದರೆಂದು ಸಿದ್ದರಾಮಯ್ಯಗೆ ಮೋದಿ ಟಾಂಗ್