Publish Date: Mon, 07 May 2018 (07:33 IST)
Updated Date: Mon, 07 May 2018 (07:35 IST)
ರಾಯಚೂರು: ಮೂಢನಂಬಿಕೆ ವಿರೋಧಿ ಎಂದು ಕರೆಯಿಸಿಕೊಳ್ಳುವ ಕರ್ನಾಟಕದ ಮುಖ್ಯಮಂತ್ರಿ ಕಾಗೆ ಕೂತಿತೆಂದು ಕಾರು ಬದಲಾಯಿಸಿದರು ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ತಮ್ಮ ವಾಗ್ಜರಿ ಬಿಟ್ಟ ಮೋದಿ ‘ಈ ರಾಜ್ಯದ ಮುಖ್ಯಮಂತ್ರಿ ಎನಿಸಿಕೊಂಡವರು ಕಾಗೆ ಕೂತಿತೆಂದು ಕಾರನ್ನೇ ಬದಲಾಯಿಸಿದರು. ಅವರ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ ಈಗ ಭಯದಿಂದ ಜೇಬಿನಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡಾಡುವ ಸ್ಥಿತಿ ಬಂದಿದೆ’ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ಐದು ದಿನಗಳ ಬಿಜೆಪಿ ಪ್ರಚಾರದ ಕೊನೆಯ ದಿನವಾದ ಇಂದು ಪ್ರಧಾನಿ ಮೋದಿ ಹುಬ್ಬಳ್ಳಿ, ರಾಯಚೂರು ಮುಂತಾದೆಡೆ ಭರ್ಜರಿ ಪ್ರಚಾರ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.