Publish Date: Sun, 06 May 2018 (07:56 IST)
Updated Date: Sun, 06 May 2018 (08:00 IST)
ಬೆಂಗಳೂರು : ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸುದೀಪ್ ಅವರು ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡಬಾರದು ಎಂದು ವಿರೋಧ ವ್ಯಕ್ತವಾಗಿದ್ದು ಇದಕ್ಕೆ ಸುದೀಪ್ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟರ್ ಮೂಲಕ ಸ್ಪಷ್ಟನೆ ನೀಡಿದ ಸುದೀಪ್ ಅವರು,’ ನಾನು ರಾಜಕೀಯ ಪ್ರಚಾರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡುವುದು ಸುಳ್ಳು. ಮಾಧ್ಯಮದವರು ಸುದ್ದಿ ಮಾಡುವ ಮುನ್ನ ವಿಚಾರಣೆ ಮಾಡಿಕೊಂಡರೆ ಉತ್ತಮ. ಚಾಮುಂಡೇಶ್ವರಿ ಕ್ಷೇತ್ರ ಪ್ರಚಾರಕ್ಕೆ ಸಿಎಂ ಅವರು ಕರೆದಿರುವುದು ಸತ್ಯ. ಆದರೆ ನಾನಿನ್ನು ಕನ್ಫರ್ಮ್ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ