Publish Date: Sat, 05 May 2018 (13:36 IST)
Updated Date: Sat, 05 May 2018 (13:37 IST)
ಜಿಲ್ಲೆಯ ಬೈಲಹೊಂಗಲ ಮತಕ್ಷೆತ್ರದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಪಾಟೀಲ ಪರ ಬಿ ಎಸ್ ಯಡಿಯೂರಪ್ಪ ಅವರು ಬೈಲಹೊಂಗಲದಲ್ಲಿ ಪ್ರಚಾರ ಸಭೆಯನ್ನುದ್ದೆಶಿಸಿ ಮಾತನಾಡಿ, ರಾಹುಲ್ ಗಾಂದಿಯೊಬ್ಬ ಬಚ್ಚಾ ಅವರನ್ನು ಇಟ್ಟುಕ್ಕೊಂಡು ಸಿ ಎಂ ಸಿದ್ದರಾಮಯ್ಯ ಅವರು ಮುಂದಿನ ಸಿ ಎಂ ನಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಒಡೆದು ಮೂರು ಭಾಗವಾಗಿದೆ. ಇನ್ನು ಚುನಾವಣೆಗೆ ಏಳು ದಿನ ಮಾತ್ರ ಬಾಕಿ ಇದೆ. ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಒಂದು ಕಡೆ ಸೇರಿ ಪ್ರಚಾರ ಮಾಡಲಿ ನೋಡೋಣ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ನವರೆ ಪಿತೂರಿ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರೆ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಎಂದ ಯಡಿಯೂರಪ್ಪ, ಬಿಜೆಪಿ ಅದಿಕಾರಕ್ಕೆ ಬಂದು 24 ಘಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕನಲ್ಲಿರುವ ರೈತರ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇನೆ. ಬಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು 1 ಲಕ್ಷದಿಂದ ಎರಡು ಲಕ್ಷದವರೆಗೆ ಏರಿಸುತ್ತೇನೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.