Select Your Language

Notifications

webdunia
webdunia
webdunia
webdunia

ಕೊಪ್ಪಳದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಕಂಪ್ಲೇಂಟ್ ವಾರ್

ಕೊಪ್ಪಳ
ಕೊಪ್ಪಳ , ಶನಿವಾರ, 5 ಮೇ 2018 (13:31 IST)
ಕೋಮುಭಾವನೆ ಕೇರಳಿಸುವ ಮತ್ತು ಮಸೀದಿಯಲ್ಲಿ ಮತಾಂತರ ನಡೆಯುತ್ತಿದೆ ಆರೋಪಿಸಿದ ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲಾಗಿದೆ.
ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಬೆಂಬಲಿಗರು ರಾಮ ಮತ್ತು ಹನುಮನ ಮೇಲಿನ ನಂಭಿಕೆಗೆ ಧಕ್ಕೆ ತರುವಂಹ ಹೇಳಿಕೆಗಳನ್ನು ನೀಡುತ್ತಿದ್ದು ಅವರ ಕ್ರಮ ಕೈಗೊಳ್ಳಿ ಎಂದು ದೂರು ದಾಖಲು ಮಾಡಲಾಗಿದೆ‌. 
 
ಮಸೀದಿಗಳಲ್ಲಿ ಹಿಂದೂ ಮಹಿಳೆಯರನ್ನು ಮತಾಂತರ ಮಾಡಲು ರೇಟ್ ಬೋರ್ಡ ಹಾಕಿರುತ್ತಾರೆ ಎಂದು ಹೇಳಿಕೆ ನೀಡಿದ್ದ ಚೈತ್ರಾ...ವಿವಿಧ ಜಾತಿಯ ಮಹಿಳೆಯರಿಗೆ ವಿವಿಧ ದರ ನಿಗದಿ ಮಾಡಿ ಮತಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದು ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು‌..‌.
 
ಕೋಮು ಸೌಹಾರ್ದ ಕದಡುವ , ಶಾಂತಿ ಸುವ್ಯವಸ್ಥೆ ಹಾಳು ಮಾಡುವ , ಆದಾರ ರಹಿತ ಆರೋಪ ಮಾಡಿದ ಚೈತ್ರಾ ಕುಂದಾಪುರ ವಿರುದ್ದ  ನಗರ ಠಾಣೆಯಲ್ಲಿ ಪಿಸಿ ಸೆಕ್ಷನ್ ೫೦೫(೨) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರುದ್ಧ ಗುಡುಗಿದ ಯುಪಿ ಸಿಎಂ