Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿರುದ್ಧ ಮೊಯಿಲಿ ಕಿಡಿ

ಪ್ರಧಾನಿ ಮೋದಿ ವಿರುದ್ಧ ಮೊಯಿಲಿ ಕಿಡಿ
ಬೆಂಗಳೂರು , ಶನಿವಾರ, 5 ಮೇ 2018 (13:52 IST)
ಉಡುಪಿ: ಉಡುಪಿಗೆ ಮೋದಿ ಬಂದದ್ದರಿಂದ ಬಿಜೆಪಿ ಸೀಟ್ ಹೆಚ್ಚಾಗಲ್ಲ. ಕಳೆದು ಬಾರಿನೂ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರವನ್ನು  ಗೆಲ್ತಿವಿ  ಎಂದು ಬಿಜೆಪಿ ಮುಖಂಡರು ಅಂದಿದ್ರು. ಆದ್ರೆ ಕಾಂಗ್ರೆಸ್  ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ  ಜಯಭೇರಿ ಸಾಧಿಸಿದೆ. ದ.ಕ ಮಂಗಳೂರು ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್  ಜಯಬೇರಿ ಸಾಧಿಸಿದೆ. 
ಈ ಬಾರಿ ಉಡುಪಿ ಜಿಲ್ಲೆಯ 5 ರಲ್ಲಿ‌ 5 ಗೆಲ್ತೆವೆ‌. ಮಂಗಳೂರು ಜಿಲ್ಲೆಯಲ್ಲಿ 8 ಕ್ಷೇತ್ರ ಗೆಲ್ತಿವಿ. ಕರಾವಳಿ ಯಲ್ಲಿ ಕಾಂಗ್ರೆಸ್  15 ರಲ್ಲಿ 15ಗೆದ್ದ ಇತಿಹಾಸ ವಿದೆ.ರಾಹುಲ್ ಸಿದ್ದರಾಮಯ್ಯ  ಕೃಷ್ಣ ಮಠಕ್ಕೆ ಹೋಗದಿದ್ದಕ್ಕೆ ಬಿಜೆಪಿ  ಟೀಕೆ ಮಾಡತಾ ಇದೆ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ. 
 
ಮೋದಿ ಉಡುಪಿ ಬಂದಾಗ ಮಠಕ್ಕೆ ಹೋಗೆ ಇಲ್ಲ.ಮಠದ ಬಗ್ಗೆ ಭಕ್ತಿ‌ ಇದ್ದ ಮೋದಿ  ಹೋಗಿಲ್ಲ, ಅವರಿಗೆ ಅಧಿಕಾರದ ಮೇಲೆ ಭಕ್ತಿ ಜಾಸ್ತಿ.ಮೋದಿ ಸರ್ಕಾರದ ಮೇಲೆ ದಲಿತ ವಿರೋಧಿ ಹವಾಮಾನ ಇದೆ, ಮಹಿಳಾ ವಿರೋಧಿ ಅಪಾದನೆ ಇದೆ. ಉತ್ತರ ಪ್ರದೇಶದ ಶಾಸಕ 18 ವರ್ಷ ಬಾಲಕಿಯನ್ನ‌ ಅತ್ಯಚಾರ ಮಾಡಿ ಕೊಂದು‌ ಬಂಧನಕ್ಕೆ ಒಳಗಾಗಿದ್ದಾನೆ. ಅದ್ರೂ ಪಕ್ಷದಿಂದ  ಅಂಥವರನ್ನ ಉಚ್ಚಾಟನೆ ಮಾಡಿಲ್ಲ.‌
 
ರಾಜ್ಯದಲ್ಲೂ ಅತ್ಯಾಚಾರಕ್ಕೆ  ಹಾಗೂ ಭಷ್ಟಾಚಾರಕ್ಕೆ ಬೆಂಬಲ ಕೊಟ್ಟುವರರಿಗೆ ಬಿಜೆಪಿ ಟಿಕೆಟ್ ನೀಡಿದೆ. ಸ್ನೇಹಿತನ ಹೆಂಡತಿಯನ್ನ ಅತ್ಯಾಚರ ಮಾಡಿದವನಿಗೆ ಟಿಕೆಟ್ ಕೊಡುತ್ತೆ.ರೆಡ್ಡಿ ಬ್ರದರ್ಸ್ ಗೂ ಟಿಕೆಟ್ ನೀಡಿದೆ.ಯಡಿಯೂರಪ್ಪ  ಮೇಲೂ  ಕೇಸ್ ಇದೆ‌.ಯಡಿಯೂರಪ್ಪ ಒಬ್ಬ ಭ್ರಷ್ಟ ಮುಖ್ಯಮಂತ್ರಿ.ಅಮಿತ್ ಷಾ ಅಪ್ಪಿ  ತಪ್ಪಿ ಇದೇ ಮಾತನ್ನು  ಹೇಳಿದ್ದಾರೆ. ಅತ್ಯಂತ ಬಾಲಡ್ಯ ವ್ಯಕ್ತಿ ಅನ್ನೋ ಕಾರಣಕ್ಕೆ ಬಿ ಎಸ್ ವೈ  ಹೇಳಿದವರಿಗೆಲ್ಲ  ಬಿಜೆಪಿ  ಟಿಕೆಟ್‌ ಕೊಟ್ಟಿದೆ.ಎಲ್ಲಾ ಕಡೆ ಕೆಜೆಪಿ ಯಿಂದ ಬಂದವರಿಗೆ ಬಿಜೆಪಿ ಟಿಕೆಟ್ ನೀಡಿದೆ.ಕೆಜಿಪಿ ಜೊತೆ ಬಿಜೆಪಿ ಅಂತರಿಕ ವಿಲೀನ ಅಗಿದೆ. ಕಾಂಗ್ರೆಸ್ ಒಂದೇ ಲಿಸ್ಟ್ ನಲ್ಲಿ ಟಿಕೆಟ್ ಬಿಡುಗಡೆ ಮಾಡಿದ್ದಾರೆ.ಆದ್ರೆ ಈ ಧೈರ್ಯ ಬಿಜೆಪಿಗಿಲ್ಲ.ಖರ್ಗೆಗೆ ಹೆಚ್ಚು  ಅಧಿಕಾರ ಕಾಂಗ್ರೆಸ್ ಕೊಟ್ಟಿದೆ.ನಮ್ಮ ಪಾರ್ಟಿಯಲ್ಲಿ‌ ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ನಮಗೆ ಬಿಟ್ಟದ್ದು.ಎಷ್ಟು ದಲಿತ‌ ಮುಖ್ಯಮಂತ್ರಿ ಬಿಜೆಪಿಯಲ್ಲಿದ್ದಾರೆ. ಎಷ್ಟು ದಲಿತರಿಗೆ ಅಧಿಕಾರ ಕೊಟ್ಟಿದ್ದೀರಾ..?
ಜನ  ಮೊದಿ ಮೇಲೆ ನಂಬಿಕೆ ಕಳಕೊಂಡಿದ್ದಾರೆ.ಎಲ್ಲಾ ಕಡೆ ಸೋಲ್ತಾ ಇದ್ದಾರೆ.
 
ಬಿಜೆಪಿ ಪತನದ ದಾರಿಯಲ್ಲಿದೆ‌, ಕರ್ನಾಟಕದಲ್ಲಿ ಬಿಜೆಪಿ ಇತಿ ಶ್ರೀ  ಆಗಲಿದೆ. ಮೋದಿ‌ಯ ಬಾಷಣದಿಂದ  ಕಾಂಗ್ರೆಸ್ ಹೆಚ್ಚು ಲಾಭವಾಗ್ತಾ ಇದೆ. ಮೋದಿಯ ಪ್ರಚಾರ ಭಾಷಣ ಬಿಜೆಪಿಗೆ ಮುಳುವಾಗಲಿದೆ. ಮೋದಿ ಭಾಷಣದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮೊಯಿಲಿ ಹೇಳಿಕೆ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ, ರೇವಣ್ಣ ವಿರುದ್ಧ ಯೋಗೇಶ್ವರ್ ವಾಗ್ದಾಳಿ