Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

webdunia
ಚಿತ್ರದುರ್ಗ , ಸೋಮವಾರ, 7 ಮೇ 2018 (07:06 IST)
ಚಿತ್ರದುರ್ಗ : ಮತ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಸುಲ್ತಾನರ ಜಯಂತಿಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು  ನೀಡಿದ್ದಾರೆ.


ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು,’ ವೀರವನಿತೆ ಓಬವ್ವ,ಮದಕರಿ ನಾಯಕ ಜಯಂತಿ ಆಚರಿಸುವ ಬದಲು ಯಾವುದೋ ಅಮಾಯಕ ಜನರ ಹತ್ಯೆ ಮಾಡಿದ ಕ್ರೂರ ಸುಲ್ತಾನರ ಜಯಂತಿ ಆಚರಿಸಿ ಚಿತ್ರದುರ್ಗದ ಜನತೆಗೆ ಕಾಂಗ್ರೆಸ್ ಅವಮಾನ ಮಾಡಿದೆ’ ಎಂದು ವಾಗ್ದಾಳಿ ನಡೆಸಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿ,’ ಪ್ರಧಾನಿ ಮೋದಿ ಅವರ ಕಣ್ಣು ಮತಕ್ಕಾಗಿ ಟಿಪ್ಪು ಮೇಲೆ ಬಿದ್ದಿದೆ. ನಿಜವಾದ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವವರು ನೀವೇ. ನಾಯಕರು, ಸಾಧುಗಳು ಮತ್ತು ಕರ್ನಾಟಕವನ್ನು ನಿರ್ಮಿಸಿದ ಸುಮಾರು 30 ಮಂದಿ ಮಹನೀಯರ ಜಯಂತಿಗಳನ್ನು ನಾವು ಆಚರಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದ ನಟ ಯಶ್, ಸಚಿವ ಎಂ.ಬಿ ಪಾಟೀಲ್ ಪರ ಪ್ರಚಾರ ಮಾಡಿದ್ಯಾಕೆ ಗೊತ್ತಾ?