Select Your Language

Notifications

webdunia
webdunia
webdunia
webdunia

ಸಿಎಂ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದ ನಟ ಯಶ್, ಸಚಿವ ಎಂ.ಬಿ ಪಾಟೀಲ್ ಪರ ಪ್ರಚಾರ ಮಾಡಿದ್ಯಾಕೆ ಗೊತ್ತಾ?

ಸಿಎಂ ಪರವಾಗಿ ಪ್ರಚಾರ ಮಾಡುವುದಿಲ್ಲವೆಂದ ನಟ ಯಶ್, ಸಚಿವ ಎಂ.ಬಿ ಪಾಟೀಲ್ ಪರ ಪ್ರಚಾರ ಮಾಡಿದ್ಯಾಕೆ ಗೊತ್ತಾ?
ವಿಜಯಪುರ , ಸೋಮವಾರ, 7 ಮೇ 2018 (07:02 IST)
ವಿಜಯಪುರ : ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೋಗುವುದಿಲ್ಲವೆಂದ ನಟ ಯಶ್ ಅವರು ಮಾತ್ರ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರ ಪರವಾಗಿ  ಮತಯಾಚಿಸಿದ್ದಾರೆ.


ತಿಕೋಟಾದಲ್ಲಿ ರೋಡ್ ಶೋ ಮೂಲಕ ತೆರೆದ ವಾಹನದಲ್ಲಿ ಆಗಮಿಸಿ  ಬಹಿರಂಗ ಸಭೆಯಲ್ಲಿ ಎಂ.ಬಿ ಪಾಟೀಲ್ ಪರ ಮತಯಾಚನೆ ಮಾಡಿದ್ದಾರೆ. ಹಾಗೇ ಎಂಬಿ ಪಾಟೀಲ್ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯೂತ್ತಿದ್ದಾರೆ. ಅವರಿಗೆ ನೀವು ಈ ಬಾರಿ ಮತ ನೀಡಿ ಗೆಲ್ಲಿಸಬೇಕು ಎಂದು ಯಶ್ ಮನವಿ ಮಾಡಿದ್ದಾರೆ.


‘ಎಂ.ಬಿ ಪಾಟೀಲ್ ಒಬ್ಬರು ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಂಡಿದ್ದರು. ಅವರ ಕೋಟಿ ವೃಕ್ಷ ಅಭಿಯಾನದ ಕನಸಲ್ಲಿ ನಾನು ಕೂಡಾ ಒಬ್ಬ ಬ್ರ್ಯಾಂಡ್ ರಾಯಭಾರಿ. ಈಗಾಗಲೇ 30-35 ಲಕ್ಷ ಮರಗಳನ್ನು ಬೆಳೆಸಿದ್ದಾರೆ. ಇನ್ನು ಅವರ ಕೋಟಿ ವೃಕ್ಷ ಅಭಿಯಾನ ಮುಂದುವರೆದಿದೆ. ಎಂ.ಬಿ ಪಾಟೀಲ್ ಅವರು ಆತ್ಮೀಯ ಸ್ನೇಹಿತರು. ಯಶೋ ಮಾರ್ಗದ ಮೂಲಕ ಇಬ್ಬರು ಸೇರಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಮತ್ತಷ್ಟು ನೀರಾವರಿ ಎಲ್ಲ ಯೋಜನೆಗಳು ಶೀರ್ಘದಲ್ಲಿ ಜಾರಿಗೆ ಬರಲಿದೆ. ನೀರಾವರಿ ವಿಷಯಕ್ಕೆ ಸಂಬಂಧಪಟ್ಟಂತೆ ಸಚಿವ ಪಾಟೀಲ್ ಹಾಗೂ ನಾನು ಪರಸ್ಪರ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ನನ್ನ ಗುರಿನೂ ಒಂದೇ ಸಚಿವ ಪಾಟೀಲ್ ಗುರಿನೂ ಒಂದೇ. ಬಾಕಿ ಉಳಿದಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು ಎಲ್ಲರಿಗೂ ನೀರು ಸಿಗುವ ಹಾಗೆ ಆಗಬೇಕು. 5 ವರ್ಷದಲ್ಲಿ ಒಂದು ಕೋಟಿ ಗಿಡ ನೆಡಬೇಕೆಂಬ ಗುರಿಯನ್ನು ಎಂ.ಬಿ ಪಾಟೀಲ್ ಇಟ್ಟುಕೊಂಡಿದ್ದಾರೆ. ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಾಕಷ್ಟು ಜ್ಞಾನ ಅವರಿಗೆ ಇದೆ’ ಎಂದು  ಎಂ.ಬಿ ಪಾಟೀಲ್ ಅವರ ಪರವಾಗಿ  ಯಶ್ ಮತಯಾಚಿಸಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪರ ಪ್ರಚಾರ ಮಾಡದಂತೆ ದರ್ಶನ್ ವಿರುದ್ಧ ಪ್ರತಿಭಟನೆ ಮಾಡಿದ ಜೆಡಿಎಸ್ ಕಾಯಕರ್ತರು