Select Your Language

Notifications

webdunia
webdunia
webdunia
webdunia

ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಳ ಒಪ್ಪಂದ: ಗೋವಿಂದ್ ಕಾರಜೋಳ

ಬಾದಾಮಿ
ಸಿಎಂ ಸಿದ್ದರಾಮಯ್ಯ ಸ್ಪಧಿ೯ಸಿದ ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಒಳ ಒಪ್ಪಂದ  ವಿಚಾರ ಕುರಿತು ಮುಧೋಳದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. 
ಇದೊಂದು ರಾಜಕೀಯ ಕ್ಷೇತ್ರದಲ್ಲಿ ನಡೆದ ಅನೈತಿಕ ಸಂಬಂಧ.ಕಾಂಗ್ರೆಸ್ ಪಕ್ಷ  ಒಳ ಒಪ್ಪಂದಿಂದ ರಾಜಕೀಯದಲ್ಲಿ ಅನೈತಿಕ ಸಂಬಂಧ ಮಾಡಿಕೊಂಡೇ ಬಂದಿದೆ.ಚುನಾವಣಾ ಸಮಯದಲ್ಲಿ ಒಂದು  ಪಕ್ಷ ಇನ್ನೊಂದು ಪಕ್ಷದ ಅಭ್ಯರ್ಥಿ ಜೊತೆ ಗೌಪ್ಯ ಮಾತುಕತೆ ನಡೆಸುವುದೇ ಅನೈತಿಕ ಸಂಬಂಧ ಇದ್ದಂತೆ.
 
ಈ ರೀತಿ ಅನೈತಿಕ ಸಂಬಂಧವನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ 70 ವರ್ಷದಿಂದ ಕಾಂಗ್ರೆಸ್ ಪಕ್ಷ ಮಾಡಿಕೊಂಡೇ ಬತಿ೯ದೆ. ಜೆಡಿಎಸ್ ಜೊತೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದು ಅಂತ  ಬಿಬಿಎಂಪಿ ಚುನಾವಣೆಯಲ್ಲಿ ಗೊತ್ತಾಗಿದೆ.
 
ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ.
ನಾಡಿನ ಜನತೆಗೆ ಗೊತ್ತಿದೆ ಯಾರು ಒಳ ಒಪ್ಪಂದ ಮಾಡಿಕೊಂಡು ಅನೈತಿಕ ಸಂಬಂಧ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 
 
ಸಿದ್ದರಾಮಯ್ಯ ಮತ್ತೊಬ್ಬರ ಮೇಲೆ ಆರೋಪ ಮಾಡೋದರಲ್ಲಿ ಹುರುಳಿಲ್ಲ ಎಂದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿಯಲ್ಲಿ ಗೋವಿಂದ ಕಾರಜೋಳ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ ವಿರುದ್ಧ ಕುಮಾರಸ್ವಾಮಿ ಗರಂ