Publish Date: Fri, 04 May 2018 (13:15 IST)
Updated Date: Fri, 04 May 2018 (13:17 IST)
ವಿಜಯಪುರದಲ್ಲಿ ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೀವ್ರ ವಾಗ್ದಾಳಿ.
ರಾಜ್ಯದಲ್ಲಿ ಓವೈಸಿ ಜೆಡಿಎಸ್ ಪರ ಪ್ರಚಾರ ಹಿನ್ನೆಲೆ.ಜೆಡಿಎಸ್ ಉಗ್ರಗಾಮಿಗಳನ್ನು ರಾಜ್ಯಕ್ಕೆ ಕರೆಯಿಸಿಕೊಳ್ತೀದೆ ಎನ್ನುವ ಮೋದಿ ಹೇಳಿಕೆಗೆ ಹೆಚ್ಡಿಕೆ ಕೆಂಡಾಮಂಡಲವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿ ತಮ್ಮ ಪಕ್ಷದಲ್ಲೆ ಟೆರೆರಿಸ್ಟ್ ಗಳನ್ನ ಇಟ್ಟುಕೊಂಡಿದ್ದಾರೆ. ಜೆಡಿಎಸ್ ಕರ್ನಾಟಕದಲ್ಲಿ ಟೆರೆರಿಸ್ಟ್ ಗಳಿಗೆ ಪ್ರೋತ್ಸಾಹ ಕೊಟ್ಟಿಲ್ಲ.ಯಾವಾಗ ಯಾವಾಗ ಟೆರರಿಸ್ಟ್ ಆಕ್ಟಿವಿಟಿಜ್ ಮಾಡಬೇಕು ಎನ್ನುವ ನಿಮ್ಮಂಥ ಅತಿ ಬುದ್ದಿವಂತಿಕೆ ನಮ್ಮಲ್ಲಿಲ್ಲ. ಮಾರ್ಮಿಕವಾಗಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ
ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳಿಗೆ ಜೆಡಿಎಸ್ ಎಂದೂ ಬೆಂಬಲ ಕೊಡಲ್ಲ ಅನ್ನೋದನ್ನ ಮೋದಿ ಮೊದಲು ತಿಳಿದುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.