Select Your Language

Notifications

webdunia
webdunia
webdunia
webdunia

ಗುರುಮಿಠಕಲ್ ಕ್ಷೇತ್ರದಲ್ಲಿ ಬದಲಾವಣೆ ಗಾಳಿ: ಕಂದಕೂರು

ಗುರುಮಿಠಕಲ್ ಕ್ಷೇತ್ರದಲ್ಲಿ ಬದಲಾವಣೆ ಗಾಳಿ: ಕಂದಕೂರು
ಬೆಂಗಳೂರು , ಗುರುವಾರ, 3 ಮೇ 2018 (16:59 IST)
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಮತದಾರರು ಬೇಸತ್ತು ಜಾತ್ಯತೀತ ಜನತಾದಳದತ್ತ ಮನಸ್ಸು ಮಾಡಿದ್ದಾರೆ. ಈ ಬಾರಿ ಗುರುಮಿಠಕಲ್ ಮತಕ್ಷೇತ್ರದಲ್ಲಿ ಬದಲಾವಣೆಯ ಸಮಯ ಬಂದಿದೆ ಎಂದು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಹೇಳಿದರು.
ಗುರುಮಿಠಕಲ್ ವಿಧಾನಸಭಾ ವ್ಯಾಪ್ತಿಯ ಯರಗೋಳದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಮತಕ್ಷೇತ್ರದಾದ್ಯಂತ ದಿನನಿತ್ಯ ತಂಡೋತಂಡವಾಗಿ ಯುವಕರು ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಈ ಚುನಾವಣೆಯಲ್ಲಿ ನೀವೆಲ್ಲ ತುಂಬು ಹೃದಯದಿಂದ ಆಶೀರ್ವದಿಸುವಿರೆಂಬ ವಿಶ್ವಾಸ ನನಗಿದೆ ಎಂದರು. 
 
ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮವಹಿಸಿ ದುಡಿಯಲು ನಾನು ಯಾವತ್ತು ಸಿದ್ಧನಿದ್ದೇನೆ. ಗುರುಮಠಕಲ್ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮಾಜಿ ಮಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ನಾವೆಲ್ಲ ಪಣ ತೊಡೋಣವೆಂದು ಕರೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಾರಿ ಕಪ್ ನಮ್ದೆ ಪಂಚಿಂಗ್ ಡೈಲಾಗ್ ಹೊಡೆದ ಕುಮಾರಸ್ವಾಮಿ