Publish Date: Mon, 07 May 2018 (07:54 IST)
Updated Date: Mon, 07 May 2018 (07:56 IST)
ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕನವರಿಕೆ ಜೋರಾಗಿದೆ.
ಪದೇ ಪದೇ ಮುಂದಿನ ಸಿಎಂ ತಾನೇ ಎನ್ನುವುದರ ಜತೆಗೆ ಮೇ 17 ರಂದು ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೆಚ್ಚಿನವರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆಯೂ ಮಾತನಾಡುತ್ತಿದ್ದಾರೆ!
ನಿನ್ನೆ ಮತ್ತೆ ವಿಜಯಪುರದಲ್ಲಿ ಇದೇ ಹೇಳಿಕೆ ನೀಡಿದ್ದಾರೆ. ನಾನು ಸಿಎಂ ಆಗಿಯೇ ಆಗುತ್ತೇನೆ. ಮೇ 17 ರಂದು ಪ್ರಮಾಣವಚನ ಸ್ವೀಕರಿಸುತ್ತೇನೆ. ಆ ದಿನ ನನ್ನ ಜತೆಗೆ ಬಸನಗೌಡ ಯತ್ನಾಳ್ ಕೂಡಾ ಸಚಿವರಾಗುತ್ತಾರೆ ಎಂದಿದ್ದಾರೆ. ಇದಕ್ಕೆ ಆತ್ಮ ವಿಶ್ವಾಸ ಎನ್ನಬೇಕೋ, ಅತಿಯಾದ ವಿಶ್ವಾಸ ಎನ್ನಬೇಕೋ? ನೀವೇ ಹೇಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.