Publish Date: Mon, 08 Jul 2019 (09:43 IST)
Updated Date: Mon, 08 Jul 2019 (09:45 IST)
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದ ಸಿಟ್ಟಿಗೆದ್ದಿರುವ ಸಿಎಂ ಕುಮಾರಸ್ವಾಮಿ ಯಾರ ಮನ ಒಲಿಸುವ ಕೆಲಸಕ್ಕೂ ಹೋಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸರ್ಕಾರ ಬೀಳುವುದಾದರೆ ಬೀಳಲಿ, ಯಾರ ಮನ ಒಲಿಕೆ ಮಾಡುವ ಕೆಲಸಕ್ಕೆ ಹೋಗುವುದು ಬೇಡ ಎಂದು ಅಮೆರಿಕಾದಿಂದ ವಾಪಸಾದ ಬಳಿಕ ಪಕ್ಷದ ನಾಯಕರ ಜತೆ ಸಭೆ ನಡೆಸಿ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ರೆಬೆಲ್ ನಾಯಕರು ಸ್ಪಷ್ಟಪಡಿಸಿದ ಬಳಿಕ ಸಿಎಂ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.