Publish Date: Sun, 07 Jul 2019 (10:47 IST)
Updated Date: Sun, 07 Jul 2019 (10:49 IST)
ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ ಶಾಸಕರು ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡುತ್ತಿದ್ದು, ಇದೀಗ ರಾಜೀನಾಮೆ ಸರಣಿಗೆ ಕಾಂಗ್ರೆಸ್ ನ ಮತ್ತೊಬ್ಬ ಅಲ್ಪಸಂಖ್ಯಾತ ಶಾಸಕ, ಕೈ ಜೋಡಿಸ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದ ನಾಯಕ ಆರ್.ರೋಷನ್ ಬೇಗ್ ಇಂದು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಇಂದು ಹಜ್ ಯಾತ್ರೆಗೆ ಚಾಲನೆ ನೀಡಲಿರುವ ರೋಷನ್ ಬೇಗ್ ಬಳಿಕ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ.
ಈ ಹಿಂದೆ ಶಾಸಕ ರೊಷನ್ ಬೇಗ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಬಿಜೆಪಿ ಸಂಪರ್ಕದಲ್ಲಿರುವ ಬೇಗ್ ರಾಜೀನಾಮೆ ಕುರಿತು ಕಾಂಗ್ರೆಸ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.