Select Your Language

Notifications

webdunia
webdunia
webdunia
webdunia

ಸರಕಾರ ಸರ್ಕಸ್- ಹೆಚ್.ಡಿ. ಕುಮಾರಸ್ವಾಮಿ, ವೇಣುಗೋಪಾಲ ಅಖಾಡಕ್ಕೆ ಎಂಟ್ರಿ

ಸರಕಾರ ಸರ್ಕಸ್- ಹೆಚ್.ಡಿ. ಕುಮಾರಸ್ವಾಮಿ, ವೇಣುಗೋಪಾಲ ಅಖಾಡಕ್ಕೆ ಎಂಟ್ರಿ
ಬೆಂಗಳೂರು , ಶನಿವಾರ, 6 ಜುಲೈ 2019 (19:55 IST)
ರಾಜ್ಯ ಮೈತ್ರಿ ಸರಕಾರದ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಒಟ್ಟು 14 ಶಾಸಕರು ಶಾಸಕರು ರಾಜೀನಾಮೆ ನೀಡಿರೋದು ಉಭಯ ಪಕ್ಷಗಳ ಮುಖಂಡರಿಗೆ ಶಾಕ್ ನೀಡಿದೆ.

ಸಿದ್ದರಾಮಯ್ಯ, ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ ಅವರು ಸರಕಾರ ಉಳಿಸಿಕೊಳ್ಳಲು ಯತ್ನ ಮುಂದುವರಿಸಿದ್ದಾರೆ. ಈ ನಡುವೆ ಅಮೆರಿಕಾ ಪ್ರವಾಸದಲ್ಲಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

webdunia
ಬೆಂಗಳೂರಿನತ್ತ ಸಿಎಂ ಆಗಮಿಸುತ್ತಿದ್ದಾರೆ. ಇನ್ನು ಕೈ ಪಾಳೆಯದ ಹೈಕಮಾಂಡ್ ಸೂಚನೆಯ ಮೇರೆಗೆ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ನಿರ್ಣಾಯಕ ಹಂತದಲ್ಲಿ ರಾಜೀನಾಮೆ ನೀಡಿರೋ ಶಾಸಕರ ಮನವೊಲಿಸುವಲ್ಲಿ ಉಭಯ ಪಕ್ಷಗಳ ಪ್ರಮುಖ ಮುಖಂಡರು ಅಂತಿಮ ಹಂತದ ಯತ್ನ ನಡೆಸಲಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

‘ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಕಾರಣ’