Publish Date: Sat, 06 Jul 2019 (17:24 IST)
Updated Date: Sat, 06 Jul 2019 (17:26 IST)
ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ತೊರೆದಿದ್ದ ಬಿಎಸ್ಪಿ ಶಾಸಕ ಮತ್ತೊಮ್ಮೆ ನಾಟ್ ರೀಚೆಬಲ್ ಆಗುವ ಮೂಲಕ ಕೈ ಪಡೆ-ತೆನೆ ಹೊತ್ತ ಮಹಿಳೆಗೆ ಮತ್ತೆ ಚಿಂತೆಗೆ ಈಡಾಗುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಸಚಿವ ಹಾಗೂ ಶಾಸಕರು ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ.
ಸಚಿವ ಪುಟ್ಟರಂಗಶೆಟ್ಟಿ ಹಾಗೂ ಹನೂರು ಶಾಸಕ ಆರ್. ನರೇಂದ್ರಗೆ ಹೈಕಮಾಂಡ್ ಬುಲಾವ್ ಬಂದಿದೆ.
ಇನ್ನು ನಾಟ್ ರೀಚಬಲ್ ಆಗಿರುವ ಬಿಎಸ್ಪಿ ಶಾಸಕ ಎನ್. ಮಹೇಶ್ ರ ರಾಜಕೀಯ ನಡೆ ಕುತೂಹಲ ಕೆರಳಿಸಿದೆ. ಎನ್.ಮಹೇಶ್ ನಡೆ ನಿಗೂಢವಾಗಿದ್ದು, ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಕ್ಷೇತ್ರದಲ್ಲಿ ವದಂತಿ ಹರಿದಾಡಲಾರಂಭಿಸಿದೆ.
ಕ್ಷೇತ್ರದಿಂದ ಕಾಣೆಯಾಗಿರುವ ಗುಂಡ್ಲುಪೇಟೆ ಶಾಸಕ ಆರ್.ನಿರಂಜನ್ ಕುಮಾರ್ ಕೂಡ ಚರ್ಚೆಗೆ ಒಳಗಾಗುತ್ತಿದ್ದಾರೆ.